ಒಂದೇ ಸೆಟ್‌ನಲ್ಲಿ ಹನುಮನ ಮುಂದೆ Sandalwood ಸ್ಟಾರ್‌ಗಳ ಸಖತ್‌ ಸ್ಟೆಪ್‌…..

ಬೆಂಗಳೂರು : ಸ್ಯಾಂಡಲ್‌ವುಡ್ ನ ನಾಲ್ಕು ಮಂದಿ ದಿಗ್ಗಜರು ಒಟ್ಟುಗೂಡಿದ್ದು, ಸಖತ್‌ ಸ್ಟೆಪ್‌ ಹಾಕಿದ್ದಾರೆ. ಅರ್ಜುನ್ ಸರ್ಜಾ, ಚಿರು ಸರ್ಜಾ, ಆ್ಯಕ್ಷನ್‌ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಒಟ್ಟಿಗೆ, ಒಂದೇ ಬಣ್ಣದ ಬಟ್ಟೆ ಧರಿಸಿ ಆಂಜನೇಯನ ಮುಂದೆ ನೃತ್ಯ ಮಾಡಿ ನಮನ ಸಲ್ಲಿಸಿದ್ದಾರೆ.

ಬೆಂಗಳೂರಿನ ಹಳೆ ಏರ್‌ಪೋರ್ಟ್‌ ರಸ್ತೆಯ ಬಳಿ ಇರುವ ಆಂಜನೇಯ ದೇವಸ್ಥಾನವೊಂದರಲ್ಲಿ ಅರ್ಜುನ್ ಸರ್ಜಾ ನಿರ್ದೇಶನದ ಪ್ರೇಮ ಬರಹ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದಲ್ಲಿ ದರ್ಶನ್‌, ಧ್ರುವ  ಸರ್ಜಾ, ಚಿರಂಜೀವಿ ಸರ್ಜಾ, ಅರ್ಜುನ್ ಸರ್ಜಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂದು ದೇವಸ್ಥಾನದಲ್ಲಿ ಆಂಜನೇಯನ ವಿಗ್ರಹದ ಮುಂದೆ ಸೆಟ್‌ ನಿರ್ಮಾಣ ಮಾಡಿದ್ದು, ನಾಲ್ವರು ನಟರು ಕೇಸರಿ ಬಣ್ಣದ ಬಟ್ಟೆ ಕಟ್ಟಿಕೊಂಡು ರಾಮನ ಪಂಚಪ್ರಾಣ ಹನುಮ ಎಂಬ ಹಾಡಿಗೆ ಸ್ಟೆಪ್‌ ಹಾಕಿದ್ದಾರೆ.

ಸಿನಿಮಾದಲ್ಲಿ ಅರ್ಜುನ್‌ ಸರ್ಜಾ ಮಗಳು ಐಶ್ವರ್ಯಾ ಸರ್ಜಾಗೆ ಚಂದನ್‌ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಸದ್ಯ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com