ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು, ಇದೇ ಮೋದಿ ಆಡಳಿತದ ಧ್ಯೇಯ : ಅನಂತ್ ಕುಮಾರ್‌

ಬೆಂಗಳೂರು : ಇಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್‌ ಅಂಬೇಡ್ಕರ್‌ ಅವರ 61ನೇ ಮಹಾಪರಿನಿರ್ವಾಣ ದಿನವಾಗಿದ್ದು, ಬಿಜೆಪಿ ಕಚೇರಿಯಲ್ಲಿ ಕಾರ್ಯಕ್ರಮವನ್ನು ಆಚರಿಸಲಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಅನಂತ್‌ ಕುಮಾರ್, ಅಂಬೇಡ್ಕರ್‌ ಕೊಟ್ಟಂತ ಸಂವಿಧಾನವೇ ನಮ್ಮ ಧರ್ಮ ಗ್ರಂಥ. ಆದ್ರೆ ಕಾಂಗ್ರೆಸ್ ಸಂವಿಧಾನವನ್ನು ಧಿಕ್ಕರಿಸಿತು. ಪರಿಣಾಮ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಯಿತು. 5 ವರ್ಷದ ಆಡಳಿತವನ್ನು 6 ವರ್ಷದವರೆಗೆ ನಡೆಸುವ ಮೂಲಕ ಕಾಂಗ್ರೆಸ್ ಸಂವಿಧಾನ ಉಲ್ಲಂಘಿಸಿತ್ತು. ತುರ್ತು ಪರಿಸ್ಥಿತಿ ಹೇರುವ ಮೂಲಕ ಯಡಿಯೂರಪ್ಪ, ಮತ್ತು ನನ್ನನ್ನೂ ಜೈಲಿಗೆ ಹಾಕಿದ್ರು. ಇದು ಅಂಬೇಡ್ಕರ್ ಆಶಯದ ವಿರುದ್ಧ ನಡೆದ ಕ್ರಮ ಎಂದು  ಕೇಂದ್ರ ಮಂತ್ರಿ ಅನಂತಕುಮಾರ್ ಹೇಳಿದ್ದಾರೆ.

ಸಂಸತ್ ಭವನದಿಂದ ಹಿಡಿದು ದೇಶಾದ್ಯಂತ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಆಚರಣೆ ಮಾಡಲಾಗ್ತಿದೆ. ಇಡೀ ಜಗತ್ತು ಅಂಬೇಡ್ಕರ್ ಅವ್ರಿಗೆ ಗೌರವ ಕೊಡುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಇದುವರೆಗೆ ಗೌರವ ನೀಡುವ ಕೆಲಸ ಮಾಡಿಲ್ಲ. ದೇಶಕ್ಕೆ ಸಂಸದೀಯ ಪ್ರಜಾಪ್ರಭುತ್ವ ಕೊಟ್ಟ ನಾಯಕ ಅಂಬೇಡ್ಕರ್. ಅಂಬೇಡ್ಕರ್ ಸಂಸತ್ತಿಗೆ ಬರಲು ಅಡ್ಡಗಾಲು ಹಾಕಿದ ಪಕ್ಷ ಕಾಂಗ್ರೆಸ್ ಎಂದು ಕಾಂಗ್ರೆಸ್‌ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

 

ನಮ್ಮ ದೇಶದ ಮೊದಲ ಭಾರತ ರತ್ನ ಅಂಬೇಡ್ಕರ್ ಅವ್ರಿಗೆ ನೀಡಬೇಕಿತ್ತು. ಆದರೆ ಕಾಂಗ್ರೆಸ್ ನ ದಲಿತ ವಿರೋಧಿ ನೀತಿಯಿಂದಾಗಿ ಅಂಬೇಡ್ಕರ್ ಅವ್ರಿಗೆ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಿರಲಿಲ್ಲ. 1989 ರಲ್ಲಿ ವಿ ಪಿ ಸಿಂಗ್ ಪ್ರಧಾನಿ ಆದಾಗ ಅಂಬೇಡ್ಕರ್ ಅವ್ರಿಗೆ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯ್ತು. ಮೋದಿ ಪ್ರಧಾನಿ ಆದ ಮೇಲೆ ಅಂಬೇಡ್ಕರ್ ಜನಸಿದ ಭೂಮಿ, ಕರ್ಮಭೂಮಿ, ಮಹಾಪರಿನಿರ್ವಾಣ ವಾದ ಸ್ಥಳಗಳನ್ನು ಮಹಾ ತೀರ್ಥ ಸ್ಥಳಗಳನ್ನಾಗಿ ಪವಿತ್ರ ಜಾಗಗಳನ್ನಾಗಿ ಅಭಿವೃದ್ಧಿ ಪಡಿಸಿದ್ದಾರೆ. ಅಂಬೇಡ್ಕರ್ ಆದರ್ಶಗಳಿಗನುಸಾರವಾಗಿ ಮೋದಿ ಸರ್ಕಾರ ಆಡಳಿತ ನಡೆಸುತ್ತಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ತತ್ವದಡಿ ಮೋದಿ ಸರ್ಕಾರ ಆಡಳಿತ ಮಾಡುತ್ತಿದೆ ಎಂದಿದ್ದಾರೆ.

 

Leave a Reply

Your email address will not be published.