ಜಾತಿ, ಧರ್ಮ ಏನಿದ್ದರೂ ಮನೆಯಲ್ಲಿರಬೇಕೇ ಹೊರತು ರಸ್ತೆಗೆ ಬರಬಾರದು : ಉಪೇಂದ್ರ

ಮಂಗಳೂರು : ಸತ್ಯವಾಗಿರಬೇಕಾರೆ ಯಾವ ಧರ್ಮವೂ ಬೇಕಾಗಿಲ್ಲ. ಜಾತಿ ಧರ್ಮ ಏನಿದ್ದರೂ ಮನೆಯಲ್ಲಿರಬೇಕೇ ಹೊರತು ರಸ್ತೆಗೆ ಬರಬಾರದು ಎಂದು ಕೆಪಿಜೆಪಿ ಪಕ್ಷದ ಸ್ಥಾಪಕ ಉಪೇಂದ್ರ ಹೇಳಿದ್ದಾರೆ.

ನಾವು ಜನರ ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ಡಿವೈಡ್‌ ಎಂಡ್‌ ರೂಲ್ ಬದಲಾಗಿ ಎಲ್ಲರೂ ಒಗ್ಗಟ್ಟಿನಿಂದಿರಬೇಕು. ಶಿಕ್ಷಣ ಹಾಗೂ ವೈದ್ಯಕೀಯ ಸೌಲಭ್ಯ ಉತ್ತಮವಾಗಿದ್ದರೆ ಭ್ರಷ್ಟಾಚಾರ ಇರುವುದಿಲ್ಲ. ಹಣಕೊಟ್ಟು ಜೈಕಾರ ಹಾಕಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಇದೇ ವೇಳೆ, ದೇಶದಲ್ಲಿ ರಾಜಕೀಯ ಪಕ್ಷಗಳ ಅಗತ್ಯವೇ ಇಲ್ಲ ಎಂದಿರುವ ಉಪೇಂದ್ರ, ಪಕ್ಷ ಇಲ್ಲದೆಯೇ ದೇಶ ನಡೆಸಬೇಕು. ಬೇರೆ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಯೋಚನೆ ಇಲ್ಲ. ಪಕ್ಷಕ್ಕೆ ಯಾರೇ ಡೊನೇಷನ್‌ ನೀಡಿದರೂ ಸ್ವೀಕಾರ ಮಾಡಲ್ಲ. ಸರ್ಕಾರಿ ನೌಕರರೆಲ್ಲ ಖಾಕಿ ಡ್ರೆಸ್‌ ತೊಡಬೇಕು. ದೇಶದಲ್ಲಿ ಒಂದೇ ಬಾರಿ ಚುನಾವಣೆ ಮಾಡುವ ಪ್ರಧಾನಿ ಮೋದಿ ಅವರ ಯೋಚನೆ ಸರಿ ಇಲ್ಲ ಎಂದಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com