BSY ಮೆಂಟಲ್ ಬ್ಯಾಲೆನ್ಸ್ ಮೀರಿ ಮಾತನಾಡುತ್ತಿದ್ದಾರೆ : B.R ಪಾಟೀಲ್
ಕಲಬುರ್ಗಿ : ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ನಮ್ಮಲ್ಲೂ ಅಸ್ತ್ರಗಳಿವೆ. ಸಮಯ ಬಂದಾಗ ಬಾಣ ಬಿಡುವುದಾಗಿ ಕಲಬುರ್ಗಿಯಲ್ಲಿ ಆಳಂದ ಶಾಸಕ ಬಿ.ಆರ್ ಪಾಟೀಲ್ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಜೊತೆ ನನಗೆ ಸ್ನೇಹವಿದೆ. ನಾನು ಸಿದ್ದರಾಮಯ್ಯನವರ ಬಾಲಂಗೋಚಿಯಲ್ಲ. ಸ್ನೇಹದಿಂದ ಮತಕ್ಷೇತ್ರದಲ್ಲಿ ಕೆಲಸ ಮಾಡಿಸುತ್ತಿದ್ದೇನೆ. ಯಡಿಯೂರಪ್ಪ ಆರ್ಎಸ್ಎಸ್ನ ಗುಲಾಮರಾಗಿದ್ದಾರೆ. ಪರಿವರ್ತನಾ ಯಾತ್ರೆಯ ಆರಂಭದಲ್ಲೇ ಬಿಜೆಪಿಗರಿಗೆ ಮುಖಭಂಗವಾಗಿದೆ. ಯಡಿಯೂರಪ್ಪ ಮೆಂಟಲ್ ಬ್ಯಾಲೆನ್ಸ್ ಮೀರಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.