ಹಿಂದುಸ್ತಾನ್ ಜಿಂದಾಬಾದ್‌ ಎಂದ ಪಾಕ್‌ ಯುವಕನಿಗೆ ಏನಾಯ್ತು ನೋಡಿ…?

ಇಸ್ಲಾಮಾಬಾದ್‌ : ಪಾಕಿಸ್ತಾನದ ಯುವಕನೊಬ್ಬ ಮನೆಯ ಗೋಡೆಯ ಮೇಲೆ ಹಿಂದುಸ್ತಾನ್‌ ಜಿಂದಾಬಾದ್‌ ಎಂದು ಬರೆದ ಹಿನ್ನೆಲೆಯಲ್ಲಿ ಆತನ ವಿರುದ್ದ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ.

ಪಾಕಿಸ್ತಾನದ ನಾರಾ ಅಮೇಜಿ ಪ್ರಾಂತ್ಯದ ಯುವಕ ಸಾಜಿದ್‌ ಶಾ ಎಂಬ ಯುವಕ ತನ್ನ ಮನೆಯ ಹೊರಗಿನ ಗೋಡೆಯ ಮೇಲೆ ಹಿಂದುಸ್ತಾನ್‌ ಜಿಂದಾಬಾದ್‌ ಘೋಷಣೆ ಬರೆದ ಹಿನ್ನೆಲೆಯಲ್ಲಿ ಆತನ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಈತ ಗೋಡೆಯ ಮೇಲೆ ಘೋಷಣೆಗಳನ್ನು ಬರೆದು ಕೂಗಿದಕೂಡಲೆ ನೆರೆಯವರು ಆತನಿಗೆ ಬುದ್ದಿ ಹೇಳಿದ್ದಾರೆ. ಇದು ಪಾಕಿಸ್ತಾನದ ಕಾನೂನಿಗೆ ವಿರುದ್ದವಾಗಿದ್ದು, ಈ ರೀತಿ ಮಾಡದಂತೆ ಸೂಚಿಸಿ, ಬರಹಗಳನ್ನು ಅಳಿಸುವಂತೆ ಸೂಚಿಸಿದ್ದರು. ಆದರೂ ಆತ ಅಳಿಸಿರಲಿಲ್ಲ. ಕೆಲ ಸ್ಥಳೀಯರು ಇದರ ಫೋಟೋ ತೆಗೆದು ಪೊಲೀಸರಿಗೆ ನೀಡಿದ್ದಾಗಿ ಡೈಲಿ ಎಕ್ಸ್‌ ಪ್ರೆಸ್  ಪತ್ರಿಕೆ ವರದಿ ಮಾಡಿದೆ.

Leave a Reply

Your email address will not be published.

Social Media Auto Publish Powered By : XYZScripts.com