ಕಾಂಗ್ರೆಸ್‌ನ ಧ್ಯೇಯ ಒಂದೇ ಅದೇ “ಅಹಿಂದ’ : CM ಸಿದ್ದರಾಮಯ್ಯ

ಹಾವೇರಿ : ಸಂಸದ ಅನಂತ್ ಕುಮಾರ್ ಗೆ ಸಂಸ್ಕಾರ ಇಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಪಾರ್ಲಿಮೆಂಟಿನ ಸಾಂವಿಧಾನಿಕ ಭಾಷೆ ಬಾರದ ಸಂಸದ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಹಾವೇರಿ ಜಿಲ್ಲೆಯ ಹಿರೆಕೆರೂರಿನಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂತವರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ, ಹುಣಸೂರು ಹನುಮ ಜಯಂತಿ ಗಲಾಟೆ ವಿಚಾರದಲ್ಲಿ ಬಿಜೆಪಿಯವರಿಗೆ ಅಮಿತ್ ಶಾ ಗಲಭೆ ಮಾಡಲು ಸೂಚಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡುವುದೇ ಅವರ ಉದ್ದೇಶ ಎಂದರು. ಮೆಕ್ಕೆಜೋಳ ಖರೀದಿ ಕೇಂದ್ರದ ವಿಚಾರದಲ್ಲಿ ಕೇಂದ್ರ ಸರ್ಕಾರದ ಕಂಡಿಷನ್ ಸರಿಯಿಲ್ಲ , ನಾವೇ ಖರೀದಿಸಿ, ನಾವೇ ಪಡಿತರ ಅಂಗಡಿ ಮುಖಾಂತರ ಮಾರಬೇಕಂತೆ ಇದು ಸರೀನಾ ಎಂದರು. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೆಗೌಡ್ರ ಮಾತಿಗೆ ತೀರುಗೇಟು ನೀಡಿದ ಸಿಎಂ, ಪಕ್ಷ ಮುಗಿಸುವವ ನಾನಲ್ಲ, ಜನರು ಬುದ್ದಿ ಕಲಿಸುತ್ತಾರೆ. ಅಹಿಂದ ಕಾಂಗ್ರೆಸ್‌ನ ಧ್ಯೇಯ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com