WATCH : ಚಲಿಸುತ್ತಿದ್ದ ಬಸ್‌ನ ಚಕ್ರಕ್ಕೆ ತಲೆಕೊಟ್ಟ ವ್ಯಕ್ತಿ : CCTVಯಲ್ಲಿ ದೃಶ್ಯ ಸೆರೆ

ಹಾಸನ : ವ್ಯಕ್ತಿಯೊಬ್ಬರು ಕೆಎಸ್‌ಆರ್‌ಟಿಸಿ ಬಸ್‌ಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಹಾಸನದಲ್ಲಿ ನಡೆದಿದ್ದು, ಈ  ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸೋಮವಾರ ಬೆಳಗ್ಗೆ 6.40ರ ಸುಮಾರಿಗೆ ಘಟನೆ ನಡೆದಿದ್ದು, ಹಾಸನದ ಬಸ್‌ ನಿಲ್ದಾಣದ ಸಮೀಪ ಚಲಿಸುತ್ತಿದ್ದ ಬಸ್‌ಗೆ ವ್ಯಕ್ತಿಯೊಬ್ಬ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಸೋಮವಾರ ಚಾಲಕನದ್ದೇ ತಪ್ಪು ಎಂದು ಆತನನ್ನು ಬಂಧಿಸಲಾಗಿತ್ತು. ಆದರೆ ಇಂದು ಸಿಸಿಟಿವಿ ಪರಿಶೀಲಿಸಿದಾಗ ವ್ಯಕ್ತಿಯೇ ಆತ್ಮಹತ್ಯೆ ಮಾಡಿಕೊಳ್ಳಲು ಚಲಿಸುತ್ತಿದ್ದ ಬಸ್‌ಗೆ ತಲೆಕೊಟ್ಟಿರುವ ವಿಷಯ ತಿಳಿದುಬಂದಿದೆ.

ಬಸ್‌ ಮಂತ್ರಾಲಯದಿಂದ ಹಾಸನಕ್ಕೆ ಬಂದು ಅಲ್ಲಿಂದ ಶಿವಮೊಗ್ಗಕ್ಕೆ ತೆರಳುತ್ತಿತ್ತು. ಈ ವೇಳೆ 45-50 ವಯಸ್ಸಿನ ವ್ಯಕ್ತಿಯೊಬ್ಬ ರಸ್ತೆ ಬದಿ ನಿಂತಿದ್ದು, ತನ್ನ ಮುಂದೆಯೇ ಸಾಗಿದ ಬಸ್‌ನ ಹಿಂಬಾಗದ ಚಕ್ರಕ್ಕೆ ತಲೆಕೊಟ್ಟಿದ್ದಾನೆ.

ತಲೆಯ ಮೇಲೆಯೇ ಚಕ್ರ ಹರಿದಿರುವ ಹಿನ್ನೆಲೆಯಲ್ಲಿ ವ್ಯಕ್ತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಮೃತ ವ್ಯಕ್ತಿಯ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಸದ್ಯ ಜಿಲ್ಲಾಸ್ಪತ್ರೆಯಲ್ಲಿ ವ್ಯಕ್ತಿಯ ಶವವನ್ನು ಇರಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

What Exactly Happened Near New Bus Stand yesterday Early Morning !, Covered CCTV ✔✔(04.12.2017)ವಿಧಿ ಆ ಕ್ಷಣದಲ್ಲಿ ಅದೆಂತಹ ಭಂಡದೈರ್ಯ ಕೊಟ್ಟಿತ್ತೊ ಏನೋ , ಆದರೆ ಈ ವ್ಯಕ್ತಿಗೆ ????????, ಚಲಿಸುವ ಬಸ್ಸಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಈ ವ್ಯಕ್ತಿ ಮಾಡಿದ್ದು ತಪ್ಪು ., ತನ್ನ ಮನೆಯವರನ್ನು ಅನಾಥ ವಾಗಿಸಿಬಿಟ್ಟ. 🙁

Posted by Hassan News on Monday, 4 December 2017

 

 

Leave a Reply

Your email address will not be published.

Social Media Auto Publish Powered By : XYZScripts.com