ಹೆಣ್ಣುಮಗು ಹುಟ್ಟಿತು ಎಂದು ಸಿಟ್ಟಿಗೆದ್ದ ಈ ಮಹಾತಾಯಿ ಮಾಡಿದ್ದೇನು ನೋಡಿ…….?

ಗಾಜಿಯಾಬಾದ್‌ : ಗಂಡು ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದ ತಾಯಿಗೆ ಹೆಣ್ಣು ಮಗುವಾಗಿದ್ದು, ಇದರಿಂದ ಬೇಸತ್ತ ಮಹಿಳೆ ಮಗುವನ್ನು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

3 ತಿಂಗಳ ಹಿಂದೆ ಆರತಿ ಎಂಬ ಯುವತಿಗೆ ಹೆಣ್ಣು ಮಗು ಜನಿಸಿತ್ತು. ಆದರೆ ಗಂಡು ಮಗು ಬೇಕೆಂಬ ಆಸೆ ಹೊತ್ತಿದ್ದ ಆರತಿಗೆ ಹೆಣ್ಣು ಮಗು ಜನಿಸಿದ್ದರಿಂದ ನಿರಾಸೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮಗುವಿನ ಮೇಲೆ ಸಿಟ್ಟಿಗೆದ್ದ ತಾಯಿ, ಭಾನುವಾರ ಮಗುವನ್ನು ದಿಂಬಿನಿಂದ ಒತ್ತಿ ಬಳಿಕ ವಾಷಿಂಗ್‌ ಮಷೀನ್‌ಗೆ ತುರುಕಿದ್ದಾಳೆ. ಬಳಿಕ ನನ್ನ ಮಗುವನ್ನು ಯಾರೋ ಅಪಹರಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರತಿಯನ್ನು ಪ್ರಶ್ನಿಸಿದಾಗ ಆಕೆ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

ಗಂಡು ಮಗು ಬೇಕೆಂದು ನಾವು ಆಕೆಗೆ ಕಿರುಕುಳ ನೀಡಿರಲಿಲ್ಲ. ಬೇಕಂತಲೇ ಆ ಹೆಣ್ಣು ಮಗುವನ್ನು ಕೊಲೆ ಮಾಡಿದ್ದಾಳೆ ಎಂದು ಆರತಿ ಕುಟುಂಬಸ್ಥರು ಆರೋಪಿಸಿದ್ದಾರೆ.

Leave a Reply

Your email address will not be published.