ಮೋದಿಯನ್ನು ತೆಗಳುವ ಭರದಲ್ಲಿ ಮತ್ತೆ ಯಡವಟ್ಟು : ಲೆಕ್ಕ ತಪ್ಪಿದ ರಾಹುಲ್‌ ಗಾಂಧಿ

ದೆಹಲಿ : ಪ್ರಧಾನಿ ಮೋದಿ ಹಾಗೂ ರಾಹುಲ್‌ ಗಾಂಧಿ ಗುಜರಾತ್‌ ಚುನಾವಣೆ ಹಿನ್ನೆಲೆಯಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಒಬ್ಬರ ತಪ್ಪುಗಳನ್ನು ಮತ್ತೊಬ್ಬರು ತೋರಿಸುವ ಕೆಲಸ ಮಾಡುತ್ತಿದ್ದಾರೆ. ಅಂತೆಯೇ ಮೋದಿ ತೆಗಳುವ ಭರದಲ್ಲಿ ಕಾಂಗ್ರೆಸ್ ಯುವರಾಜ ರಾಹುಲ್‌ ಗಾಂಧಿ ಯಡವಟ್ಟು ಮಾಡಿಕೊಂಡಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೇಳೆ, ಅಡುಗೆ ಅನಿಲ, ಈರುಳ್ಳಿ, ಟೊಮೆಟೊ ಡೀಸೆಲ್‌ ಸೇರಿದಂತೆ ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಹೆಚ್ಚಾಗಿದೆ ಎಂದು ಪಟ್ಟಿಯ ಮೂಲಕ ತೋರಿಸಿದ್ದರು. ಆದರೆ ಆ ಪಟ್ಟಿಯ ಶೇಕಡಾವಾರು ಲೆಕ್ಕದಲ್ಲಿ ತಪ್ಪಾಗಿದ್ದು, ಕೂಡಲೆ ಅದನ್ನು ಡಿಲೀಟ್ ಮಾಡಿದ್ದಾರೆ.

ಬೆಲೆ ಏರಿಕೆ ಬಗ್ಗೆ ಮಾತನಾಡುವಾಗ, 2014ರಲ್ಲಿ ಅನಿಲ ದರ 414 ಇತ್ತು. ಆದರೆ 2017ರಲ್ಲಿ 742ಕ್ಕೆ ಬಂದಿದೆ ಎಂದಿದ್ದರು. ಈ ಪ್ರಕಾರದಲ್ಲಿ ಶೇ.79ರಷ್ಟು ಹೆಚ್ಚಳವಾಗಿದೆ. ಆದರೆ ರಾಹುಲ್‌ ಹೇಳುವ ಭರದಲ್ಲಿ ಶೇ.179ರಷ್ಟು ಏರಿಕೆಯಾಗಿದೆ ಎಂದಿದ್ದಾರೆ.

ಅಂತೆಯೇ ಬೇಳೆ, ಟೊಮೆಟೋ ಸೇರಿದಂತೆ ಎಲ್ಲಾ ವಸ್ತುಗಳ ವಿಚಾರದಲ್ಲೂ ಇದೇ ರೀತಿ ತಪ್ಪು ಲೆಕ್ಕ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com