ಫೋಟೋ ಫಿನಿಶ್‌ಗೆ ಕಾದಿದೆ ಗುಜರಾತ್‌ ಚುನಾವಣೆ : ABP ಸಮೀಕ್ಷೆ

ದೆಹಲಿ : ಗುಜರಾತ್‌ ಚುನಾವಣೆಗೆ ದಿನ ಹತ್ತಿರವಾಗುತ್ತಿದೆ. ಚುನಾವಣಾ ಕಣ ರಂಗೇರಿದೆ. ಈ ಮಧ್ಯೆ ಗೆಲ್ಲಲೇಬೇಕೆಂಬ ಹಠ ಹೊತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ ಜನರ ಮನವೊಲಿಸುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

ಈ ಮಧ್ಯೆ ಖಾಸಗಿ ಮಾಧ್ಯಮ ಎಬಿಪಿ ನ್ಯೂಸ್‌, ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು, ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿಗೆ ಕಾಂಗ್ರೆಸ್‌ ಸಮಬಲದ ಪೈಪೋಟಿ ನೀಡುತ್ತದೆ ಎಂದಿದೆ. ಬಿಜೆಪಿ ಗುಜರಾತ್‌ನಲ್ಲಿ ಸರಳ ಬಹುಮತದೊಂದಿಗೆ ಗೆಲುವು ಸಾಧಿಸಲಿದೆ. ಆದರೆ ಗೆಲ್ಲುವ ಕ್ಷೇತ್ರಗಳ ಸಂಖ್ಯೆ ಇಳಿಮುಖವಾಗಲಿದೆ ಎಂದು ಭವಿಷ್ಯ ನುಡಿದಿದೆ.

ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿ 91ರಿಂದ 99ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದ್ದು, ಕಾಂಗ್ರೆಸ್‌ಗೆ 78-86 ಸ್ಥಾನ ಗಳಿಸಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ಕೇವಲ 4ರಿಂದ 5 ಸ್ಥಾನಗಳ ಅಂತರವಿದ್ದು, ಇತರೆ ಪಕ್ಷಗಳಿಗೆ 3ರಿಂದ 7 ಕ್ಷೇತ್ರಗಳು ಲಭಿಸುವ ಸಾಧ್ಯತೆ ಇದೆ  ಎಂದು ಸಮೀಕ್ಷೆ ಹೇಳಿದೆ.

ಗುಜರಾತ್‌ ವಿಧಾನಸಭೆಯಲ್ಲಿ 182 ಸದಸ್ಯ ಬಲವಿದ್ದರೆ ಪಕ್ಷ ಅಧಿಕಾರಕ್ಕೆ ಬರಲು 92 ಸದಸ್ಯ ಬಲ ಬೇಕಿದೆ. ಆದರೆ ಬಿಜೆಪಿ ಗೆಲ್ಲಲು ಕಾಂಗ್ರೆಸ್‌ಗೆ ಪೈಪೋಟಿ ನೀಡಬೇಕಾಗಿರುವುದಂತೂ ಸತ್ಯ. ಈ ಹಿಂದೆ ಪಟೇಲ್‌ ಸಮುದಾಯ ಬಿಜೆಪಿ ಪರ ನಿಂತಿತ್ತು. ಆದರೆ ಈ ಬಾರಿ ಪಟೇಲ್‌ ಸಮುದಾಯ ಕಾಂಗ್ರೆಸ್‌ ಪರ ಒಲವು ತೋರಿದ್ದು, ಕಾಂಗ್ರೆಸ್‌ಗೆ ಪ್ಲಸ್‌ ಪಾಯಿಂಟ್ ಆಗಲಿದೆ.

Leave a Reply

Your email address will not be published.

Social Media Auto Publish Powered By : XYZScripts.com