Cricket : 410 ಟಾರ್ಗೆಟ್ ನೀಡಿದ ಭಾರತ : ಸೋಲು ತಪ್ಪಿಸಿಕೊಳ್ಳಲು ಲಂಕಾ ಹೋರಾಟ

ದೆಹಲಿಯ ಫಿರೋಜ್ ಷಾ ಕೋಟ್ಲಾದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ, ಲಂಕಾ ತಂಡಕ್ಕೆ 410 ರನ್ ಟಾರ್ಗೆಟ್ ನೀಡಿದೆ. ಎರಡನೇ ಇನ್ನಿಂಗ್ಸ್ ನಲ್ಲಿ 246 ರನ್ ಗಳಿಸಿದ ಟೀಮ್ ಇಂಡಿಯಾ ಡಿಕ್ಲೇರ್ ಮಾಡಿಕೊಂಡಿತು. ಭಾರತದ ಪರವಾಗಿ ಶಿಖರ್ ಧವನ್ 67, ಚೇತೇಶ್ವರ ಪೂಜಾರಾ 49, ವಿರಾಟ್ ಕೊಹ್ಲಿ 50, ರೋಹಿತ್ ಶರ್ಮಾ 50 ರನ್ ಗಳಿಸಿದರು.

410 ರನ್ ಗುರಿಯನ್ನು ಬೆನ್ನತ್ತಿರುವ ಶ್ರೀಲಂಕಾ, ನಾಲ್ಕನೇ ದಿನದಾಟದ ಅಂತ್ಯಕ್ಕೆ ತನ್ನ 2ನೇ ಇನ್ನಿಂಗ್ಸ್ ನಲ್ಲಿ 31 ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಧನಂಜಯ ಡಿ ಸಿಲ್ವಾ ಹಾಗೂ ಏಂಜೆಲೋ ಮ್ಯಾಥ್ಯೂಸ್ ನಾಟೌಟ್ ಆಗಿ ಉಳಿದಿದ್ದಾರೆ.

ಭಾರತದ ಪರವಾಗಿ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ 2 ಹಾಗೂ ವೇಗಿ ಮಹಮ್ಮದ್ ಶಮಿ 1 ವಿಕೆಟ್ ಪಡೆದರು.  5ನೇ ದಿನದಾಟ ಬಾಕಿಯಿದ್ದು ಲಂಕಾ ಗೆಲುವಿಗೆ ಇನ್ನೂ 379 ರನ್ ಅಗತ್ಯವಿದೆ. ಭಾರತಕ್ಕೆ 7 ವಿಕೆಟ್ ಅಗತ್ಯವಿದೆ.

Leave a Reply

Your email address will not be published.