ವರದಕ್ಷಿಣೆಗೆ ಬಲಿಯಾಯ್ತು 1 ವರ್ಷದ ಮಗು : ಅಪ್ಪ, ಅಜ್ಜಿಯಿಂದಲೇ ಕೊಲೆ ?

ಬೆಳಗಾವಿ : ವರದಕ್ಷಿಣೆ ಕಿರುಕುಳಕ್ಕೆ ಒಂದು ವರ್ಷದ ಮಗು ಬಲಿಯಾದ ಘಟನೆ ಬೆಳಗಾವಿಯ ಕೊಟಬಾಗಿ ಗ್ರಾಮದಲ್ಲಿ ನಡೆದಿದೆ. ಮೃತ ಮಗುವನ್ನು 1 ವರ್ಷದ ಜೋಯೆಲ್‌ ನಾಮದೇವ ನಡುವಿನಕೇರಿ ಎಂದು ಗುರುತಿಸಲಾಗಿದೆ.

ಗಂಡ ಅನೇಕ ಬಾರಿ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದು, ಕಳೆದ ಒಂದು ವರ್ಷದಿಂದ ದಾಂಡೇಲಿಯಲ್ಲಿರುವ ತವರು ಮನೆಯಲ್ಲಿ ತಾಯಿ-ಮಗು ಗಂಡನಿಂದ ದೂರವಾಗಿ ವಾಸಿಸುತ್ತಿದ್ದರು. 10 ದಿನದ ಹಿಂದೆ ತಾಯಿ ಮಗುವನ್ನು ಗಂಡನ ಮನೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ತಾಯಿಯನ್ನು ಹೊರಗೆ ಕಳುಹಿಸಿ ಗಂಡ ಹಾಗೂ ಗಂಡನ ತಾಯಿ ಮಗುವಿಗೆ ಕೀಟನಾಶಕ ಸಿಂಪಡಿಸಿ ಕೊಲೆ ಮಾಡಿರುವುದಾಗಿ ಮಗುವಿನ ತಾಯಿ ಆರೋಪಿಸಿದ್ದಾರೆ. ಹುಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com