ಬೆಂಗಳೂರಿಗರಿಗೆ ರಾಜ್ಯ ಸರ್ಕಾರದಿಂದ ವಸತಿ ಭಾಗ್ಯ : ವೆಬ್‌ಪೋರ್ಟಲ್‌ಗೆ ಚಾಲನೆ

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಒಂದು ಲಕ್ಷ ಮನೆ ನಿರ್ಮಾಣ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಆನ್‌ಲೈನ್‌ ಅರ್ಜಿ ಸ್ವೀಕಾರದ ವೆಬ್‌ ಪೋರ್ಟಲ್‌ಗೆ ಚಾಲನೆ ನೀಡಿದ್ದು, ಈ ವೇಳೆ ವಸತಿ ಸಚಿವ ಕೃಷ್ಣಪ್ಪ, ಬೆಂಗಳೂರು ಅಭಿವೃದ್ದಿ ಸಚಿವ ಕೆ.ಜೆ ಜಾರ್ಜ್, ಸರ್ಕರಾದ ಮುಖ್ಯ ಕಾರ್ಯದರ್ಶಿ ರತ್ನ ಪ್ರಭ ಸೇರಿದಂತೆ ಅನೇಕ ಮಂದಿ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

ಸರಳವಾಗಿ ಮಾಹಿತಿ ತಿಳಿಸುವಂತಾಗಲು ಈ ವೆಬ್‌ ಪೋರ್ಟಲ್‌ ಆರಂಭಿಸಲಾಗಿದ್ದು, ಇದಕ್ಕೆ ಅರ್ಜಿ ಸಲ್ಲಿಸಬೇಕಾದವರು ಬೆಂಗಳೂರಿನಲ್ಲಿ ಕನಿಷ್ಠ 5 ವರ್ಷಗಳಿಂದ ವಾಸವಾಗಿರಬೇಕು. ಆಧಾರ್‌ ಕಾರ್ಡ್‌, ಜಾತಿ ಪ್ರಮಾಣ ಪತ್ರ, ವಾಸ ದೃಢೀಕರಣ ಪತ್ರದ ಆರ್‌.ಡಿ ನಂಬರ್‌, ಪಡಿತರ ಚೀಟಿ ಇದ್ದರೆ ಅರ್ಜಿ ಸಲ್ಲಿಸಬಹುದಾಗಿದೆ.

ಇದೇ ವೇಳೆ ಮಾತನಾಡಿ ಸಿದ್ದರಾಮಯ್ಯ, 5.5 ರಿಂದ ಆರು ಲಕ್ಷ ರೂ. ವರೆಗೆ ಮನೆ ವಿತರಣೆ ಮಾಡಲಾಗುತ್ತದೆ. ಅರ್ಜಿ ಶುಲ್ಕ 100ರೂ. ನಿಗದಿಪಡಿಸಲಾಗಿದೆ. ಒಂದು ಲಕ್ಷ ಸೂರಿಲ್ಲದ ಕುಟುಂಬಗಳಿಗೆ ಸೌಲಭ್ಯ ಸಿಗಲಿದೆ. ಎಸ್ ಸಿಯವರಿಗೆ ಶೇ30, ಎಸ್ ಟಿಯವರಿಗೆ ಶೇ10, ಅಲ್ಪ ಸಂಖ್ಯಾತರಿಗೆ ಶೇ10, ಸಾಮಾನ್ಯ ವರ್ಗಕ್ಕೆ ಶೇ.50 ಮೀಸಲಾತಿ ಕಲ್ಪಿಸಲಾಗಿರುವುದಾಗಿ ಹೇಳಿದ್ದು, ಐದು ವರ್ಷ ಬೆಂಗಳೂರಿನ ವಾಸಿಗರು, ವಸತಿಹೀನರಾದವರಿಗೆ ಈ ಸೌಲಭ್ಯ ಸಿಗಲಿದೆ. www.ashraya.kar.nic.in/cmonelakh ವೆಬ್ ಸೈಟ್‌ನಲ್ಲಿ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

 

Leave a Reply

Your email address will not be published.