Lady ಪೊಲೀಸರಿಗೇ ಡಾರ್ಲಿಂಗ್‌ ಎಂದ ಕಿರಾತಕರು…ಮುಂದೇ ಆಗಿದ್ದೇ ಬೇರೆ….

ಬೆಂಗಳೂರು : ಬೆಂಗಳೂರಿನಲ್ಲಿ ಮಹಿಳಾ ಪೊಲೀಸರಿಗೇ ರಕ್ಷಣೆ ಇಲ್ಲದಂತಹ ಪರಿಸ್ಥಿತಿ ಎದುರಾಗಿದೆ. ಸೋಮವಾರ ತಡರಾತ್ರಿ ಮಹಿಳೆಯರ ಸುರಕ್ಷತೆಗೆಂದೇ ಇರುವ ಪಿಂಕ್‌ ಹೊಯ್ಸಳ ವಾಹನದಲ್ಲಿ ಮಹಿಳಾ ಪೊಲೀಸ್‌ ಸಿಬ್ಬಂದಿ ಕರ್ತವ್ಯದ ಮೇಲಿದ್ದರು.

ಕುಡಿದ ಮತ್ತಿನಲ್ಲಿ ರೋಹಿತ್‌ ಹಾಗೂ ವೈಭವ್‌ ಎಂಬ ಇಬ್ಬರು ಯುವಕರು ಕಂಠಪೂರ್ತಿ ಕುಡಿದು ಬಾರ್‌ನಿಂದ ಹೊರಬಂದು ಪಿಂಕ್ ಹೊಯ್ಸಳದಲ್ಲಿದ್ದ ಮಹಿಳಾ ಸಿಬ್ಬಂದಿ ಬಳಿ ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೆ ಕಾರಿನೊಳಗೆ ಬಗ್ಗಿ ಮಹಿಳಾ ಸಿಬ್ಬಂದಿಯ ಮೈ ಕೈ ಮುಟ್ಟಿ ಡಾರ್ಲಿಂಗ್ ಎಂದು ಕರೆದು ಲೈಂಗಿಕ ಕಿರುಕುಳ ನೀಡಿದ್ದಾರೆ. ಅಲ್ಲದೆ ಕಾರಿನ ಡೋರ್‌ ತೆಗೆದು ಮಹಿಳಾ ಪೇದೆಗಳನ್ನು ಹೊರಗೆಳೆಯುವ ಯತ್ನ ಮಾಡಿದ್ದಾರೆ. ಇದನ್ನು ತಡೆಯಲೆತ್ನಿಸಿದ ಪೊಲೀಸ್‌ ಪೇದೆ ಮಂಜಣ್ಣ ಅಡ್ಡಿ ಪಡಿಸಿದ್ದು, ಅವರಿಗೂ ಬೆದರಿಕೆ ಹಾಕಿದ್ದಾರೆ.

ಅಲ್ಲದೆ ನೀವು ಪೊಲೀಸಿನವರಾದರೆ ನಮಗೇನು ಮಾಡಲು ಆಗಲ್ಲ ಎಂದು ದರ್ಪ ತೋರಿದ್ದಾರೆ. ಪೇದೆ ಮಂಜಣ್ಣ ಈಗ ವೈಯಾಲಿ ಕಾವಲ್‌ ಪೊಲೀಸರಿಗೆ ದೂರು ನೀಡಿದ್ದು, ವೈಭವ್‌ ಹಾಗೂ ರೋಹಿತ್‌ನನ್ನು ಬಂಧಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com