ಜಾನ್ ದೇವರಾಜ್ ಸೇರಿ ರಾಜ್ಯದ ಐವರಿಗೆ ಶಿಲ್ಪಕಲಾ ಅಕಾಡೆಮಿ ಗೌರವ ಪ್ರಶಸ್ತಿ

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸಭೆಯಲ್ಲಿ ಈ ಕೆಳಕಂಡ 05 ಮಂದಿ ಶಿಲ್ಪಿಗಳನ್ನು 2017ನೇ ಸಾಲಿನ ಗೌರವ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿರುತ್ತದೆ. 2017ನೇ ಸಾಲಿನ ಪ್ರಶಸ್ತಿ ಪುರಸ್ಕೃತರು.

1. ಶ್ರೀ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ(ಸಂಪ್ರದಾಯ ಶಿಲ್ಪ)  – ಕಲಬುರಗಿ ಜಿಲ್ಲೆ

2. ಶ್ರೀ ಶ್ಯಾಮಸುಂದರ್ ಭಟ್.ಬಿ (ಸಂಪ್ರದಾಯ ಶಿಲ್ಪ) – ಮೈಸೂರು ಜಿಲ್ಲೆ

3. ಶ್ರೀ ಮಾನಪ್ಪ ಶಂಕ್ರಪ್ಪ ಬಡಿಗೇರ (ರಥ ಶಿಲ್ಪ)  – ವಿಜಯಪುರ ಜಿಲ್ಲೆ

4. ಶ್ರೀ ಜಾನ್ ದೇವರಾಜ್ (ಸಮಕಾಲೀನ ಶಿಲ್ಪ) – ಬೆಂಗಳೂರು

5. ಶ್ರೀ ಎಂ.ರಾಮಮೂರ್ತಿ (ಸಮಕಾಲೀನ ಶಿಲ್ಪ) – ಬೆಂಗಳೂರು

ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ.50,000-00ಗಳ (ರೂಪಾಯಿ ಐವತ್ತು ಸಾವಿರ ಮಾತ್ರ) ನಗದು, ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರಿನಲ್ಲಿ ಏರ್ಪಡಿಸಲಾಗುವುದು. ಸಮಾರಂಭದ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು ವಾರ್ಷಿಕ ಶಿಲ್ಪಕಲಾ ಪ್ರದರ್ಶನ-2017ಕ್ಕೆ  ಶಿಲ್ಪಕಲಾ ಕೃತಿಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಿರುವ ಬಗ್ಗೆ.

*******

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ವಾರ್ಷಿಕ ಶಿಲ್ಪಕಲಾ ಪ್ರದರ್ಶನ-2017ಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಬಂದಂತಹ ಸಾಂಪ್ರದಾಯಿಕ ಮತ್ತು ಸಮಕಾಲೀನ, ಜಾನಪದ ಶೈಲಿಯ ಸುಮಾರು 110ಶಿಲ್ಪಕಲಾಕೃತಿಗಳು ಬಂದಿದ್ದು, ಅವುಗಳಲ್ಲಿ ಆಯ್ಕೆ ಮತ್ತು ನಿರ್ಣಾಯಕ ಸಮಿತಿಯು ಈ ಕೆಳಕಂಡ 06 ಶಿಲ್ಪಿಗಳ ಶಿಲ್ಪಕಲಾಕೃತಿಗಳನ್ನು ಅಕಾಡೆಮಿ ಬಹುಮಾನಕ್ಕೆ ಆಯ್ಕೆ ಮಾಡಲಾಗಿದ್ದು ಹಾಗೂ ಮೈಸೂರಿನ ರಾಮ್‍ಸನ್ಸ್ ಕಲಾ ಪ್ರತಿಷ್ಠಾನ, ದಿ.ಕೆ.ಎಸ್.ಆರ್.ಪಿ.ಗಂಗಾಧರ್ ಎಂ.ಬಡಿಗೇರ, ವಿಜಯಪುರ, ಶಿಲ್ಪ ಶಾಸ್ತ್ರಿ ನಾಗೇಂದ್ರಾಚಾರ್ಯ, ಸ್ಮಾರಕ ಬಹುಮಾನ, ಅಜ್ಜಿಹಳ್ಳಿ, ಇವರು ಶಿಲ್ಪಕಲಾ ಅಕಾಡೆಮಿಯು ಏರ್ಪಡಿಸುವ ವಾರ್ಷಿಕ ಶಿಲ್ಪಕಲಾ ಪ್ರದರ್ಶನಕ್ಕೆ ಬಂದಿರುವ ಶಿಲ್ಪಕಲಾಕೃತಿಗಳಲ್ಲಿ ತಲಾ ಒಂದೊಂದು ಶಿಲ್ಪಕಲಾಕೃತಿಗೆ ಬಹುಮಾನ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು. ಬಹುಮಾನ ವಿತರಣಾ ಸಮಾರಂಭವನ್ನು ಬೆಂಗಳೂರಿನಲ್ಲಿ ಏರ್ಪಡಿಸಲಾಗುವುದು. ಸಮಾರಂಭದ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.

ಕ್ರ.ಸಂ. ಶಿಲ್ಪಿಗಳ ಹೆಸರು ಶೀರ್ಷಿಕೆ ಮಾಧ್ಯಮ

1. ಶ್ರೀ ಗೋಪಾಲ ಕಮ್ಮಾರ (ಬೆಂಗಳೂರು) ಶೀರ್ಷಿಕೆ ರಹಿತ ಮಿಶ್ರ ಮಾಧ್ಯಮ

2. ಕುಮಾರಿ ನವ್ಯ.ಎನ್ (ಬೆಂಗಳೂರು) ಶೀರ್ಷಿಕೆ ರಹಿತ ಮಿಶ್ರ ಮಾಧ್ಯಮ

3. ಶ್ರೀ ವಿಶಾಲ್.ಕೆ (ಶಿವಮೊಗ್ಗ) ಃಇIಓಉ ಖಿಖಇಓಆಙ ಫೈಬರ್

4. ಶ್ರೀ ದೇವರಾಜ.ಎಂ (ಬೆಂಗಳೂರು) ಹೊಯ್ಸಳ ಗಣೇಶ ಕಲ್ಲು

5. ಶ್ರೀ ವಿ.ನಾಗರಾಜ (ಬೆಂಗಳೂರು) ಶ್ರೀರಾಮ,ಲಕ್ಷ್ಮಣ,ಸೀತಾ,ಆಂಜನೇಯ ಕಂಚು

6. ಶ್ರೀ ಮಹೇಶ್.ಟಿ.ಆರ್ (ರಾಮನಗರ) ಕಾಳಿಕಾದೇವಿ ಮರ

ರಾಮ್‍ಸನ್ಸ್ ಕಲಾ ಪ್ರತಿಷ್ಠಾನ ಮೈಸೂರು, ಇವರ ಬಹುಮಾನಕ್ಕೆ ಆಯ್ಕೆಯಾದ ಶಿಲ್ಪಕೃತಿ

1. ಶ್ರೀ ಮೌನೇಶ್ ಕೆ ಕಂಬಾರ (ಯಾದಗಿರಿ) ಸರಸ್ವತಿ ಮರ

ದಿ.ಕೆ.ಎಸ್.ಆರ್.ಪಿ.ಗಂಗಾಧರ್ ಎಂ.ಬಡಿಗೇರ ಪ್ರಶಸ್ತಿ ವಿಜಯಪುರ ಇವರ ಬಹುಮಾನಕ್ಕೆ ಆಯ್ಕೆಯಾದ ಶಿಲ್ಪಕೃತಿ

2. ಶ್ರೀ ವಿಠ್ಠಲ್ ರಾಯಪ್ಪ ಕಂಬಾರ (ರಾಮನಗರ) ರೋಮನ್ ಮಹಿಳೆ ಮರ

ಶಿಲ್ಪ ಶಾಸ್ತ್ರಿ ನಾಗೇಂದ್ರಾಚಾರ್ಯ, ಸ್ಮಾರಕ ಪ್ರಶಸ್ತಿ, ಅಜ್ಜಿಹಳ್ಳಿ,  ಇವರ ಬಹುಮಾನಕ್ಕೆ ಆಯ್ಕೆಯಾದ ಶಿಲ್ಪಕೃತಿ

3. ಶ್ರೀ ಎನ್.ದಕ್ಷಿಣಾ ಮೂರ್ತಿ (ಮೈಸೂರು) ಶ್ರೀ ಚಂದ್ರನಾಥ ಸ್ವಾಮಿ ಜೈನ ತೀರ್ಥಂಕರ ಬೆಳ್ಳಿ

Leave a Reply

Your email address will not be published.