Ashes Cricket : ಆ್ಯಂಡರ್ಸನ್ ಮಾರಕ ದಾಳಿ : ಇಂಗ್ಲೆಂಡ್ ಗೆ 354 ಟಾರ್ಗೆಟ್

ಅಡಿಲೇಡ್ ಓವಲ್ ನಲ್ಲಿ ಪ್ರವಾಸಿ ಇಂಗ್ಲೆಂಡ್ ಹಾಗೂ ಆತಿಥೇಯ ಆಸ್ಟ್ರೇಲಿಯಾ ನಡೆಯುತ್ತಿರುವ ಎರಡನೇ ಆ್ಯಶಸ್ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ. ಗೆಲುವಿಗೆ 354 ರನ್ ಟಾರ್ಗೆಟ್ ಪಡೆದಿರುವ ಇಂಗ್ಲೆಂಡ್, ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ನಾಲ್ಕನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 176 ರನ್ ಸೇರಿಸಿದೆ. ಇಂಗ್ಲೆಂಡ್ ಪರವಾಗಿ ಕ್ರಿಸ್ ವೋಕ್ಸ್ ಹಾಗೂ ಅರ್ಧಶತಕ ಗಳಿಸಿರುವ ನಾಯಕ ಜೋ ರೂಟ್ ನಾಟೌಟ್ ಆಗಿ ಉಳಿದಿದ್ದಾರೆ.

ಇದಕ್ಕೂ ಮುನ್ನ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ ದಾಳಿಗೆ ಸಿಲುಕಿದ ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್ ನಲ್ಲಿ 138 ಕ್ಕೆ ಆಲೌಟ್ ಆಯಿತು. ಉತ್ತಮ ಬೌಲಿಂಗ್ ಪ್ರದರ್ಶಿಸಿದ ಜೇಮ್ಸ್ ಆ್ಯಂಡರ್ಸನ್ 5 ಹಾಗೂ ಕ್ರಿಸ್ ವೋಕ್ಸ್ 4 ವಿಕೆಟ್ ಪಡೆದರು.

ಕೊನೆಯ ದಿನದಾಟ ಬಾಕಿಯಿದ್ದು 5ನೇ ದಿನ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 178 ರನ್ನುಗಳ ಅಗತ್ಯವಿದ್ದು, ಆಸ್ಟ್ರೇಲಿಯಾ ಗೆಲುವಿಗೆ 6 ವಿಕೆಟ್ ಅಗತ್ಯವಿದೆ.

Leave a Reply

Your email address will not be published.

Social Media Auto Publish Powered By : XYZScripts.com