U.P ಚುನಾವಣೆ : ನನ್ನ ಮತವೇ ನನಗೆ ಬಿದ್ದಿಲ್ಲ ಎಂದ ಎಸ್‌ಪಿ ಅಭ್ಯರ್ಥಿ…?

ಲಖನೌ : ಉತ್ತರ ಪ್ರದೇಶದಲ್ಲಿ ನಡೆದ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಆದರೆ ಈ ಗೆಲುವಿಗೆ ಇವಿಎಂ ದೋಷ ಕಾರಣವಿರಬಹುದು ಎಂದು ಸಮಾಜವಾದಿ ಪಕ್ಷದ ಅಭ್ಯರ್ಥಿಯೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮೂರು ದಿನಗಳ ಹಿಂದೆ ಎಸ್‌ಪಿ ಅಭ್ಯರ್ಥಿ ಅಪೂರ್; ವರ್ಮಾ ಅವರಿಗೆ ಒಂದು ಮತವೂ ಬಿದ್ದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಪ್ರತಿಭಟನೆ ನಡೆಸುತ್ತಿದ್ದು, ನಾನು ಹಾಗೂ ನನ್ನ ಕುಟುಂಬದ ಮೂವರು ನನಗೆ ಮತ ಹಾಕಿದ್ದರು. ಆ ಮತಗಳೂ ನನಗೆ ಬಿದ್ದಿಲ್ಲ. ಇದು ಬಿಜೆಪಿಯ ಕುತಂತ್ರವೇ ಸರಿ ಎಂದು nationalheraldindia.com ಗೆ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಪಕ್ಷಕ್ಕೆ ಸೇರಿರದ ಪ್ರತಿಯೊಬ್ಬರು ಮರು ಚುನಾವಣೆ ನಡೆಸುವಂತೆ ಆಗ್ರಹಿಸುತ್ತಿದ್ದಾರೆ. ಇವಿಎಂ ಯಂತ್ರದಲ್ಲಿ ದೋಷವಿದ್ದ ಕಾರಣ ಈ ರೀತಿ ನಡೆದಿದೆ ಎಂದು ಅಪೂರ್ವ ಆರೋಪಿಸಿದ್ದಾರೆ. ನನ್ನ ಮತವೇ ನನಗೆ ಬಿದ್ದಿಲ್ಲ ಎಂದು ಹೇಳುತ್ತಿರುವ 7ನೇ ಅಭ್ಯರ್ಥಿ ಇವರು ಎಂದು ಮೂಲಗಳು ವರದಿ ಮಾಡಿವೆ.

सपा उमीदवार को मिले 0 वोट उसका खुद का वोट evm मईया खा गई???????????????? जै हो चुनाव आयोग की????????

Posted by I Want To Vote For Aam Aadmi Party on Friday, 1 December 2017

Leave a Reply

Your email address will not be published.

Social Media Auto Publish Powered By : XYZScripts.com