ಅತ್ಯಾಚಾರ ಮಾಡಲೆತ್ನಿಸಿದ ಕಾಮುಕರಿಂದ ತಪ್ಪಿಸಿಕೊಳ್ಳಲು ಗರ್ಭಿಣಿ ಮಾಡಿದ್ದೇನು..?

ತೆಲಂಗಾಣ : ಕಾಮುಕರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಚಲಿಸುತ್ತಿದ್ದ ವ್ಯಾನ್‌ನಿಂದ ಗರ್ಭಿಣಿ ಜಿಗಿದ ಪರಿಣಾಮ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಕಲಾವತಿ ಎಂದು ಗುರುತಿಸಲಾಗಿದೆ.

ಕಲಾವತಿ 7 ತಿಂಗಳ ಗರ್ಭಿಣಿಯಾಗಿದ್ದು, ಕೆಲಸ ಮುಗಿಸಿ ಮನೆಗೆ ಹೋಗಲು ತಮ್ಮ ಮಗಳು ಶ್ರೀಶಾಳೊಂದಿಗೆ ಕೊಂಡಪಲ್ಲಿ ಎಂಬ ಗ್ರಾಮದಿಂದ ವ್ಯಾನ್‌ ಹತ್ತಿದ್ದರು. ಈ ವೇಳೆ ಇಬ್ಬರು ಅಪರಿಚಿತರು ಕಲಾವತಿ ಅವರ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ್ದಾರೆ. ಸಹಾಯಕ್ಕಾಗಿ ಕಲಾವತಿ ಕಿರುಚಿದರೂ ಚಾಲಕ ವ್ಯಾನ್‌ ನಿಲ್ಲಿಸಿಲ್ಲ. ಆದ್ದರಿಂದ ಕಾಮುಕರಿಂದ ತಪ್ಪಿಸಿಕೊಳ್ಳಲು ಮಹಿಳೆ ವ್ಯಾನ್‌ ನಿಂದ ಜಿಗಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವ್ಯಾನ್‌ ನಿಂದ ಹೊರಗೆ ಹಾರಿದ ಕಾರಣ ಕಲಾವತಿ ಅವರ ತಲೆಗೆ ಪೆಟ್ಟು ಬಿದ್ದು ಸಾವಿಗೀಡಾಗಿದ್ದಾರೆ. ಬಳಿಕ ಕಲಾವತಿ ಅವರ ಮಗಳನ್ನು ಸ್ಪಲ್ಪ ದೂರದಲ್ಲೇ ಎಸೆದು ಹೋಗಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com