ಮಳೆ ಹುಡುಗಿಗೆ ಕೂಡಿಬಂತು ಕಂಕಣ ಬಲ : ಹಸೆಮಣೆ ಏರಲು ಪೂಜಾ Ready

ರಾಯಚೂರು : ಮಳೆಹುಡುಗಿ ಪೂಜಾಗಾಂಧಿಗೆ ಕಂಕಣ ಬಲ ಕೂಡಿ ಬಂದಿದ್ದು, ಹಸೆಮಣೆ ಏರಲು ಸಿದ್ಧತೆ ನಡೆಸುತ್ತಿದ್ದಾರೆ. ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೀಗ ಸಂತೋಷವಾಗಿದ್ದೇನೆ, ಆದಷ್ಟು ಬೇಗ ಮದುವೆಯ ಸುದ್ದಿ ನೀಡುವುದಾಗಿ ಹೇಳಿದ್ದಾರೆ.

ಮತ್ತೊಂದೆಡೆ ಅವರ ದಂಡುಪಾಳ್ಯ-3 ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು. ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ತೆರೆ ಕಾಣಲಿದೆ. ಇದೇ ವೇಳೆ ತಮ್ಮ ರಾಜಕೀಯ ನಡೆ ಕುರಿತು ಮಾತನಾಡಿದ ಪೂಜಾ, ನನಗೆ ರಾಜಕಾರಣಕ್ಕೆ ಬರುವ ಆಲೋಚನೆ ಸದ್ಯಕ್ಕಿಲ್ಲ ಎಂದಿದ್ದಾರೆ. ಇದೇ  ವೇಳೆ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷಕ್ಕೆ ಶುಭ ಕೋರಿದ್ದಾರೆ.

ಈ ಹಿಂದೆ ಪೂಜಾ ಗಾಂಧಿ ಅವರ ನಿಶ್ಚಿತಾರ್ಥ ಉದ್ಯಮಿ ಆನಂದ್ ಗೌಡ ಎಂಬುವವರ ಜೊತೆ ನಡೆದಿದ್ದು, ಕಾರಣಾಂತರಗಳಿಂದ ಮದುವೆ ನಡೆದಿರಲಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com