‘ ಬುಲೆಟ್ ಟ್ರೇನ್ ಬೇಡ ಅನ್ನೋರು ಎತ್ತಿನ ಗಾಡಿಯಲ್ಲಿ ಓಡಾಡಿ ‘ : ನರೇಂದ್ರ ಮೋದಿ

‘ ಬುಲೆಟ್ ಟ್ರೇನ್ ವಿರೋಧಿಸುವವರು ಎತ್ತಿನ ಗಾಡಿಯಲ್ಲಿ ಓಡಾಡಿ ‘ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.  ರವಿವಾರ ಗುಜರಾತಿನ ಭರೂಚ್ ನಗರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ ‘ ಬುಲೆಟ್ ಟ್ರೇನ್ ಬೇಡ ಎನ್ನುವವರು ಎತ್ತಿನಗಾಡಿಯಲ್ಲಿ ಓಡಾಡಿ, ನಮಗೇನು ಅಭ್ಯಂತರವಿಲ್ಲ. ಕಾಂಗ್ರೆಸ್ ರ್ಕಾರ ಕೂಡ ಈ ಯೋಜನೆಯನ್ನು ಜಾರಿಗೊಳಿಸಲು ಪ್ರಯತ್ನಿಸಿತ್ತು. ಆದರೆ ಅದರಲ್ಲಿ ವಿಫಲರಾದ ಕಾರಣ ಈಗ ವಿರೋಧಿಸುತ್ತಿದ್ದಾರೆ.

‘ ಮುಂಬೈ – ಅಹಮದಾಬಾದ್ ಟ್ರೇನ್ ಮಾರ್ಗದ ನಿರ್ಮಾಣ ಆರಂಭವಾದರೆ ಈ ಪ್ರದೇಶದ ಎಷ್ಟೋ ಜನರಿಗೆ ಉದ್ಯೋಗ ಲಭಿಸಬಹೆಂಬುದನ್ನು ಯೋಚಿಸಿ. ಬುಲೆಟ್ ಟ್ರೇನ್ ಮಾರ್ಗದ ನಿರ್ಮಾಣ ಸಿಮೆಂಟ್ ಎಲ್ಲಿಂದ ಬರುತ್ತದೆ, ಕಬ್ಬಿಣ ಎಲ್ಲಿಂದ ಬರುತ್ತದೆ, ಕಾರ್ಮಿಕರು ಎಲ್ಲಿಂದ ಬರುತ್ತಾರೆ..? ಭಾರತದಿಂದಲೇ ಅಲ್ಲವೇ..? ಇವುಗಳನ್ನೆಲ್ಲ ಯಾರು ಖರೀದಿಸುತ್ತಾರೆ..? ಜಪಾನ್ ಅಲ್ಲವೇ. ಅದರಿಂದ ಭಾರತಕ್ಕೆ ಲಾಭವಾಗುವುದಿಲ್ಲವೇ..? ‘ ಎಂದು ಮೋದಿ ಕೇಳಿದ್ದಾರೆ.

‘ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ಕಚ್ ಹಾಗೂ ಭರೂಚ್ ಜಿಲ್ಲೆಗಳು, ಬಿಜೆಪಿ ಸರಕಾರದ ಆಡಳಿತದ ಅವಧಿಯಲ್ಲಿ ತುಂಬ ಅಭಿವೃದ್ಧಿಯನ್ನು ಹೊಂದಿವೆ ‘ ಎಂದು ಹೇಳಿದರು.

Leave a Reply

Your email address will not be published.

Social Media Auto Publish Powered By : XYZScripts.com