ನಾವು ಯಾರ ಪರವೂ ಅಲ್ಲ, ವಿರುದ್ದವೂ ಅಲ್ಲ, ನಮ್ಮದು ಸತ್ಯಪರ : ರವಿ ಚೆನ್ನಣ್ಣನವರ್

ಮೈಸೂರು : ನಾವು ಯಾರ ಪರವೂ ಇಲ್ಲ.  ಯಾರ ವಿರುದ್ದವೂ ಇಲ್ಲ. ನಾವಿರುವುದು ಸತ್ಯದ ಪರ. ನಮಗೆ ಎಲ್ಲರ ಹಿತ ಮುಖ್ಯ ಎಂದು ಮೈಸೂರು ಎಸ್‌ಪಿ ರವಿ ಚೆನ್ನಣ್ಣನವರ್ ಹೇಳಿದ್ದಾರೆ.

ನಾವು ಸಂವಿಧಾನಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದೇವೆಯೇ ಹೊರತು ಇಲ್ಲಿ ಯಾರ ಆಜ್ಞೆಯೂ ಇಲ್ಲ ಎಂದು ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದ್ದಾರೆ.

ಹುಣಸೂರಿನಲ್ಲಿ ಭಾನುವಾರ ಹನುಮಜಯಂತಿ ಮೆರವಣಿಗೆಗೆ ಅವಕಾಶ ನೀಡದೆ, ಪ್ರತಾಪ್‌ ಸಿಂಹ ಅವರನ್ನು ವಶಕ್ಕೆ ತೆಗೆದುಕೊಂಡಿರುವ ಬಗ್ಗೆ ಸೋಮವಾರ ರವಿ ಚೆನ್ನಣ್ಣನವರ್‌ ಬಗ್ಗೆ ಟೀಕಿಸಿದ್ದ ಪ್ರತಾಪ್‌ ಸಿಂಹ ಟ್ವೀಟ್‌ ಮಾಡಿದ್ದರು. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರು ರವಿ ಡಿ. ಚೆನ್ನಣ್ಣನವರ್‌, ಹೌದು, ನಾನು ಹಾಗೂ ಅಣ್ಣಾಮಲೈ, ನಮ್ಮ ಸಹೋದ್ಯೋಗಿಗಳಿಂದ, ಪೊಲೀಸ್‌ ಪೇದೆಯಿಂದಲೂ ಕಲಿಯುವಂತದ್ದು ಇದೆ. ನಾವೆಂದಿಗೂ ಪರಿಪೂರ್ಣರಲ್ಲ. ಕಲಿಯುವುದು ಇದ್ದೇ ಇರುತ್ತದೆ. ಆದರೆ ನಾವು ಯಾರ ಅಣತಿಯಂತೆಯೂ ಕೆಲಸ ಮಾಡುವುದಿಲ್ಲ. ನಮಗೆ ಸಂಸದರ ಬಗ್ಗೆಯೂ ಗೌರವವಿದೆ. ಏನಾದರು ಆಕ್ಷೇಪ, ತೊಂದರೆಗಳಿದ್ದಲ್ಲಿ ಹಿರಿಯರ ಗಮನಕ್ಕೆ ತರಬಹುದು ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com