SP ರವಿ ಚೆನ್ನಣ್ಣನವರ್‌ CM ಆಜ್ಞೆಯಂತೆ ಕೆಲಸ ಮಾಡ್ತಾರೆ : ಪ್ರತಾಪ್ ಆರೋಪ

ಮೈಸೂರು : ಹುಣಸೂರಿನಲ್ಲಿ ನಡೆದ ಘಟನೆಗೆ ಜಿಲ್ಲಾಡಳಿತವೇ ಹೊಣೆ. ಮೈಸೂರು ಎಸ್‌ಪಿ ರವಿ ಚೆನ್ನಣ್ಣನವರ್‌ ಸರ್ಕಾರದ ಆಜ್ಞೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್‌ ಸಿಂಹ ಆರೋಪಿಸಿದ್ದಾರೆ.

ಹನುಮ ಜಯಂತಿ ವಿವಾದ ಸಂಬಂಧ ಮಾತನಾಡಿದ ಪ್ರತಾಪ್‌  ಸಿಂಹ, ಗೂಂಡಾ ಸಂಸ್ಕೃತಿ ನನ್ನದಲ್ಲ. ಸಿಎಂ ಸಿದ್ದರಾಮಯ್ಯ, ದಿನೇಶ್  ಗುಂಡೂರಾವ್‌, ಹಾಗೂ ಅವರಪ್ಪ ಗುಂಡೂರಾವ್‌ರದ್ದು ಗೂಂಡಾ ಸಂಸ್ಕೃತಿ, ಅವರು ರಾಜಕೀಯಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹನುಮ ಜಯಂತಿಯ ದಿನವಾದ ಭಾನುವಾರ ಪೊಲೀಸರು ನನ್ನ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದರು. ಆದ್ದರಿಂದ ನಾನೇ ಕಾರಿನಲ್ಲಿ ಹೋಗಬೇಕಾಗಿ ಬಂತು. ಮೈಸೂರು ಎಸ್.ಪಿ ರವಿ ಚೆನ್ನಣ್ಣನವರ್ ಸರ್ಕಾರದ ಆಜ್ಞೆಯಂತೆ ಕೆಲಸ ಮಾಡುತ್ತಿದ್ದಾರೆ. ಹನುಮ ಜಯಂತಿ ವಿಚಾರವಾಗಿ ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಅಮಿತ್ ಶಾ ಅವರಿಗೂ ಇದಕ್ಕೂ ಸಂಬಂಧವಿಲ್ಲ. ಅವರು ಸಮಾಜದ ಶಾಂತಿ ಕದಡುವಂತೆ ಸೂಚಿಸಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com