ಚುನಾವಣೆಗಾಗಿ ರಾಜ್ಯದಲ್ಲಿ ಕೋಮುದಳ್ಳುರಿ ಹೊತ್ತಿಸುತ್ತಿದ್ದಾರೆಯೇ ಅಮಿತ್ ಶಾ..?!!

ಮೈಸೂರು : ಹುಣಸೂರಿನಲ್ಲಿ ನಡೆದ ಗಲಭೆಗೆ ಅಮಿತ್‌ ಅವರ ಬೆಂಬಲವಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರತಾಪ್‌ ಸಿಂಹ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ವಿಡಿಯೋವೊಂದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಕೆಲ ದಿನಗಳ ಹಿಂದೆ ಸಂಸದ ಪ್ರತಾಪ್ ಸಿಂಹ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೊವೊಂದನ್ನು ಹಾಕಿದ್ದರು. ಅದರಲ್ಲಿ ಸ್ವತಃ ಪ್ರತಾಪ್ ಸಿಂಹ ಅವರೇ ಯುವ ಮೋರ್ಚಾ ವತಿಯಿಂದ ರಾಜ್ಯದಲ್ಲಿ ಉಗ್ರ ಹೋರಾಟ ಮಾಡಬೇಕು ಎಂದು ಅಮಿತ್ ಶಾ ಹೇಳಿದ್ದರು. ಅದೇ ರೀತಿ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಹೇಳಿದ್ದೆ ಎಂದು ಹೇಳಿದ್ದರು.

ಈಗ ಈ ವಿಡಿಯೊ ಎಲ್ಲೆಡೆ ಹರಿದಾಡುತ್ತಿದ್ದು, ರಾಜ್ಯದಲ್ಲಿ ದೊಂಬಿ ಹುಟ್ಟಿಸಲು ಅಮಿತ್ ಶಾ ಅವರೇ ಪ್ರತಾಪ್‌ ಸಿಂಹ ಅವರಿಗೆ ಸುಪಾರಿ ಕೊಟ್ಟಿದ್ದರು. ಆದ್ದರಿಂದಲೇ ಪ್ರತಾಪ್‌ ಸಿಂಹ ಬೇಕಂತಲೇ ಹನುಮ ಜಯಂತಿಯ ನೆಪದಲ್ಲಿ ಶಾಂತಿ ಕದಡುವ ಕೆಲಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಅಮಿತ್ ಶಾ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿಗೆ ಬಂದಿದ್ದಾಗ ರಾಜ್ಯ ಬಿಜೆಪಿ ಮುಖಂಡರಿಗೆ ಸರಿಯಾಗಿ ಕ್ಲಾಸ್‌ ತೆಗೆದುಕೊಂಡಿದ್ದರು. ಆಗ ಯುವ ಮೋರ್ಚಾ ಕ್ರಿಯಾಶೀಲವಾಗಿಲ್ಲದ್ದರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಯುವಮೋರ್ಚಾ ಉಗ್ರ ಪ್ರತಿಭಟನೆ ಮಾಡಬೇಕು. ಟಿಯರ್‌ ಗ್ಯಾಸ್‌, ಲಾಠಿ ಚಾರ್ಜ್‌ ಆಗುವ ಹಂತಕ್ಕೆ ಪ್ರತಿಭಟನೆ ನಡೆಯಬೇಕು ಎಂದು ಹೇಳಿದ್ದರು ಎಂದು ಅವರೇ ವಿಡಿಯೊದಲ್ಲಿ ಹೇಳಿದ್ದರು.

0.37 ಸೆಕೆಂಡ್ ವಿಡಿಯೊ ತಪ್ಪದೆ ವೀಕ್ಷಿಸಿ.ರಾಜ್ಯದಲ್ಲಿ ಗಲಾಟೆ ದೊಂಬಿ ಸೃಷ್ಟಿಸುವಂತೆ ಅಮಿತ್ ಶಾ ಕರೆ – ಸಂಸದ ಪ್ರತಾಪ್ ಸಿಂಹ ಹೇಳಿಕೆ ????????????ಕೋಮುವಾದಿ ಬಿಜೆಪಿ ಕುತಂತ್ರ ಮತ್ತೊಮ್ಮೆ ಬಯಲು By:ಚಂದ್ರಶೇಖರ್

Posted by Namma Devadurga on Saturday, 2 December 2017

Leave a Reply

Your email address will not be published.

Social Media Auto Publish Powered By : XYZScripts.com