ಕಳೆದು ಹೋದ MLA “ಎಮ್ಮೆ”ಗಳು : ಪೊಲೀಸರಿಂದ ಹಗಲಿರುಳು ಹುಡುಕಾಟ

ಲಖನೌ : ಲಖನೌದಲ್ಲಿ ವಿಚಿತ್ರ ಪ್ರಕರಣವೊಂದು ಪೊಲೀಸರಿಗೆ ತಲೆನೋವಾಗಿದೆ. ಕಳೆದ ವಾರ ಲಖನೌದಲ್ಲಿ ಬಿಜೆಪಿ ಶಾಸಕರ ತೋಟದ ಮನೆಯಿಂದ ಎಮ್ಮೆಗಳು ಕಳುವಾಗಿದ್ದು, ಆ ಎಮ್ಮೆಗಳಿಗಾಗಿ ಪೊಲೀಸರು ಹಗಲಿರುಳು ಹುಡುಕಾಟ ನಡೆಸಿದ್ದಾರೆ.

ಬಿಜೆಪಿ ಶಾಸಕ ಸುರೇಶ್‌ ರಾಹಿ ಅವರ ತೋಟದ ಮನೆಯಿಂದ ಒಂದು ಎಮ್ಮೆ ಹಾಗೂ ಎಮ್ಮೆ ಕರು ಕಾಣೆಯಾಗಿದೆ. ಈ ಬಗ್ಗೆ ಸುರೇಶ್‌ ಅವರು ಕೊಟ್ಟಾಲಿ  ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಮ್ಮೆಗಳ ಪತ್ತೆಗಾಗಿ ತಂಡವನ್ನು ರಚಿಸಲಾಗಿದ್ದು, ಹುಡುಕಾಟ ನಡೆಸಲಾಗುತ್ತಿದೆ. ಶಾಸಕರು ಹೇಳುವಂತೆ ಎರಡೂ ಎಮ್ಮೆಗಳು 1 ಲಕ್ಷ ರೂ ಮೌಲ್ಯದ್ದಾಗಿದ್ದು, ಆದ್ದರಿಂದ ದೂರು ದಾಖಲಿಸಿದ್ದಾಗಿ ಹೇಳಿದ್ದಾರೆ.

ಈ ಹಿಂದೆ 2014ರಲ್ಲಿ ಸಹ ಸಮಾಜವಾದಿ ಪಕ್ಷದ ಮುಖಂಡ ಅಜಾಮ್‌ ಖಾನ್‌ ತಮ್ಮ ಎಮ್ಮೆಗಳು ಕಳೆದುಹೋಗಿದ್ದರ ಬಗ್ಗೆ ದೂರು ದಾಖಲಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com