Congress ಗೆ ರಾಹುಲ್‌ ಹೈಕಮಾಂಡ್‌ ಆದರೆ, ನಮಗೆ ಜನರೇ ಹೈಕಮಾಂಡ್‌ : ಮೋದಿ

ಗಾಂಧಿನಗರ : ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಗೆ ರಾಹುಲ್‌ ಗಾಂಧಿ ನಾಮಪತ್ರ ಸಲ್ಲಿಸಿದ್ದು, ಯುವರಾಜನನ್ನು ರಾಜನನ್ನಾಗಿ ಮಾಡಲು ಎಲ್ಲಾ ಸಿದ್ದತೆ ನಡೆಯುತ್ತಿದೆ. ಈ ಕುರಿತು ಪ್ರಧಾನಿ ಮೋದಿ ವ್ಯಂಗ್ಯ ಮಾಡಿದ್ದು, ಕಾಂಗ್ರೆಸ್‌ನಲ್ಲಿ ಔರಂಗಜೇಬನ ಆಡಳಿತ ನಡೆಯುತ್ತಿದೆ ಎಂದು ಗೇಲಿ ಮಾಡಿದ್ದಾರೆ.

ವಲ್ಸದ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ ಕಾಂಗ್ರೆಸ್‌ನಲ್ಲಿರುವ ಔರಂಗಜೇಬನ ಆಡಳಿತಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕಾಂಗ್ರೆಸ್‌ನಲ್ಲಿ ರಾಹುಲ್ ಗಾಂಧಿ ಹೈಕಮಾಂಡ್‌. ಆದರೆ ನಮಗೆ ದೇಶದ ಜನರೇ ಹೈಕಮಾಂಡ್. ಅವರ ಕಾಳಜಿಯೇ ನಮಗೆ ಮುಖ್ಯ. ಇಂದು ಕಾಂಗ್ರೆಸ್‌ನವರೇ ಇದು ವಂಶಾಡಳಿತದ ಪಕ್ಷ ಎಂದು ಒಪ್ಪಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ಔರಂಗಜೇಬನ ಕಾಲದಲ್ಲಿ ಚುನಾವಣೆ ಇತ್ತೇ ? ಅವರಿಗೆ ಉತ್ತರಾಧಿಕಾರಿ ಯಾರು ಎಂಬುದು ಗೊತ್ತಿತ್ತು. ಅಂತೆಯೇ ಕಾಂಗ್ರೆಸ್‌ನಲ್ಲೂ ವಂಶಪಾರಂಪರ್ಯ ಆಡಳಿತಕ್ಕೇ ಮೊದಲ ಆದ್ಯತೆ ಎಂದಿದ್ದಾರೆ. ಎಲ್ಲರಿಗೂ ಗೊತ್ತಿದೆ ರಾಹುಲ್‌ ಗಾಂಧಿಯೇ ಮುಂದಿನ ಅಧ್ಯಕ್ಷರೆಂದು ಎಂದು ಲೇವಡಿ ಮಾಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com