ಮದುವೆಗೂ ಮುನ್ನ ಹಾದಿಯಾ ಪತಿ ಶಾಫಿನ್‌ ISIS ಸಂಪರ್ಕದಲ್ಲಿದ್ದ : NIA

ದೆಹಲಿ : ಕೇರಳ ಲವ್‌ ಜಿಹಾದ್‌ ಪ್ರಕರಣದ ಯುವತಿ ಹಾದಿಯಾ ಪತಿ ಶಾಫಿನ್‌ ಜಹಾನ್‌ ಮದುವೆಗೂ ಮುನ್ನ ಐಸಿಸ್‌ ಉಗ್ರರ ಜೊತೆ ನಂಟು ಹೊಂದಿದ್ದ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹೇಳಿದೆ.

ಶಾಪಿನ್‌ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಕಾರ್ಯಕರ್ತರು, ಐಸಿಸ್‌ನ ಮನ್ಸೀದ್‌ ಹಾಗೂ ಪಿ. ಸಫ್ವನ್‌ ಜೊತೆ ಫೇಸ್‌ಬುಕ್‌ನಲ್ಲಿ ಸಂಪರ್ಕ ಹೊಂದಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಮನ್ಸೀದ್‌ ಹಾಗೂ ಸಫ್ವಿನ್ ಅವರನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಂಧಿಸಲಾಗಿತ್ತು. ಭಾರತದ ಪ್ರಮುಖ ರಾಜಕೀಯ ನಾಯಕರು, ನ್ಯಾಯಮೂರ್ತಿಗಳು ಸೇರಿದಂತೆ ಹಲವು ಮುಖಂಡರ ಹತ್ಯೆಗೆ ಸಂಚು ರೂಪಿಸುತ್ತಿದ್ದ ಗುಂಪಿನಲ್ಲಿ ಇವರಿಬ್ಬರೂ ಇದ್ದರು ಎಂದು ತಿಳಿದುಬಂದಿತ್ತು. ಈ ಕುರಿತು ಈಗಲೂ ತನಿಖೆ ನಡೆಯುತ್ತಿದೆ.

ಅಲ್ಲದೆ ಶಾಫಿನ್‌ ಗೆಳೆಯ ಮುನೀರ್‌ಗೂ ಸಹ ಉಗ್ರರ  ನಂಟಿರುವುದಾಗಿ ಹೇಳಲಾಗಿದೆ. ಈತ ಹಾದಿಯಾ ಹಾಗೂ ಶಾಫಿನ್‌ ಮದುವೆ ಮಾಡಿಸುವಲ್ಲಿ ಮುಂಚೂಣಿಯಲ್ಲಿದ್ದ.

Leave a Reply

Your email address will not be published.

Social Media Auto Publish Powered By : XYZScripts.com