ಪ್ರತಾಪ್‌ ಸಿಂಹ ವಿರುದ್ದ ಜಾಮೀನು ರಹಿತ ಕೇಸ್‌ ಇದೆ , ಸಂಸದ ಅಂತ ಬಿಟ್ಟಿದ್ದಾರೆ : CM

ದೆಹಲಿ : ಕಾನೂನು ಉಲ್ಲಂಘಿಸುವವರನ್ನು ಬಂಧಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಂಸದ ಪ್ರತಾಪ್‌ ಸಿಂಹ ವಿಚಾರವಾಗಿ ಮಾತನಾಡಿದ ಸಿಎಂ, ಕಾನೂನು ಉಲ್ಲಂಘನೆ ಮಾಡಿದ್ದಕ್ಕಾಗಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ನಡೆಸುತ್ತಿದೆ. ಆದರೆ ಕಾನೂನು ಉಲ್ಲಂಘನೆ ಮಾಡುವವರನ್ನು ಬಂಧಿಸುವಲ್ಲಿ ತಪ್ಪಿಲ್ಲ ಎಂದಿದ್ದಾರೆ.

ಹನುಮ ಜಯಂತಿ ಮಾಡುವುದಕ್ಕೆ ನಾವು ಬೇಡ ಎಂದಿರಲಿಲ್ಲ. ಆದರೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿತ್ತು. ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಪೊಲೀಸರು ಮೆರವಣಿಗೆಗೆ ಮಾರ್ಗಸೂಚಿ ನೀಡಿದರು. ಅದನ್ನು ಪಾಲಿಸದೆ ಪ್ರತಾಪ್‌ ಸಿಂಹ ತಪ್ಪು ಮಾಡಿದರು. ಪೊಲೀಸ್‌ ಭದ್ರತೆ ಇಲ್ಲದೆ ಅವರು ಕೇಳಿದ ಕಡೆ ಜಾಗ ಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ನಿಯಮ ಉಲ್ಲಂಘಿಸಿ ಬ್ಯಾರಿಕೇಡ್‌ ಮೇಲೆ ಕಾರು ಚಲಾಯಿಸಿದ್ದಾರೆ. ಕಾನೂನು ಮಾಡುವ ನಾವೇ ಕಾನೂನನ್ನು ಗೌರವಿಸದಿದ್ದರೆ ಹೇಗೆ. ಪ್ರತಾಪ್‌ ಸಿಂಹ ವಿರುದ್ಧ ಜಾಮೀನು ರಹಿತ ಕೇಸ್‌ ದಾಖಲಾಗಿದೆ. ಸಂಸದರಾದ ಹಿನ್ನೆಲೆಯಲ್ಲಿ ಅವರನ್ನು ಬಿಟ್ಟು ಕಳುಹಿಸಲಾಗಿದೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com