ಪೂಜಾರಾಗೆ ಚಾಲೆಂಜ್ ಮಾಡೋದಿಲ್ವಂತೆ ಕೊಹ್ಲಿ : ಕ್ಯಾಪ್ಟನ್ ಭಯಕ್ಕೆ ಕಾರಣವೇನು..?

ದೆಹಲಿಯಲ್ಲಿ ಶ್ರೀಲಂಕಾ ಹಾಗೂ ಭಾರತ ತಂಡಗಳ ನಡುವಿನ, 3ನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಟೀಮ್ ಇಂಡಿಯಾ ಬ್ಯಾಟ್ಸಮನ್ ಚೇತೇಶ್ವರ ಪೂಜಾರಾ, ಕ್ಯಾಪ್ಟನ್ ಕೊಹ್ಲಿ ಸಂದರ್ಶನ ಮಾಡಿದ್ದಾರೆ. ಈ ವೇಳೆ ಪೂಜಾರಾ ಕೊಹ್ಲಿಗೆ ‘ ಕ್ರಿಕೆಟ್ ಬಿಟ್ಟು ಬೇರೆ ಯಾವುದಾದರೂ ಆಟದಲ್ಲಿ ನನಗೆ ಚಾಲೆಂಜ್ ಮಾಡಲು ಬಯಸುವಿರಾ..? ‘ ಎಂದು ಕೇಳಿದ್ದಾರೆ.

Related image

ಪ್ರಶ್ನೆ ಕೇಳಿದ ನಂತರ ಹಣೆ ಚಚ್ಚಿಕೊಂಡ ಕೊಹ್ಲಿ ತಮಾಷೆಯಾಗಿ ಉತ್ತರ ನೀಡಿದ್ದಾರೆ. ಪೂಜಾರಾ ಅವರನ್ನು ಚಾಲೆಂಜ್ ಮಾಡಲು ತಾವು ಏಕೆ ಇಷ್ಟಪಡುವುದಿಲ್ಲವೆಂದು ವಿರಾಟ್ ಹೇಳಿದ್ದಾರೆ.

‘ ನಾನು ತುಂಬ ಸ್ಪರ್ಧಾತ್ಮಕ ಮನೋಭಾವದವನು. ಆದರೆ ತಪ್ಪುಗಳನ್ನೇ ಮಾಡದವರ ವಿರುದ್ಧ ಆಡಲು ಇಷ್ಟಪಡುವುದಿಲ್ಲ. ಪೂಜಾರಾ ಎಲ್ಲ ಆಟಗಳಲ್ಲಿಯೂ ತುಂಬ ರಕ್ಷಣಾತ್ಮಕವಾಗಿ ಆಡುತ್ತಾರೆ. ಆದರೆ ನಾನು ಹಲವು ಅನ್ ಫೋರ್ಸ್ಡ್ ತಪ್ಪುಗಳನ್ನು ಮಾಡಿ ಎಲ್ಲದರಲ್ಲಿಯೂ ಸೋಲುತ್ತೇನೆ. ಟೇಬಲ್ ಟೆನ್ನಿಸ್, ಟೆನಿಸ್, ಫಿಫಾ ವಿಡಿಯೋಗೇಮ್ ಎಲ್ಲದರಲ್ಲಿಯೂ ಪೂಜಾರಾ ನನ್ನನ್ನು ಸೋಲಿಸುತ್ತಾರೆ. ಆದರೆ ಬ್ಯಾಡ್ಮಿಂಟನ್ ಒಂದನ್ನು ಆಡಿ ಪ್ರಯತ್ನಿಸಬೇಕಿದೆ. ಅದರಲ್ಲಿ ನಾನು ಪೂಜಾರಾ ಅವರನ್ನು ಸೋಲಿಸಬಹುದು ‘ ಎಂದು ಹೇಳಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿದ ಪೂಜಾರಾ ‘ ಸರಿ, ಈ ಚಾಲೆಂಜ್ ಪೆಂಡಿಂಗ್ ಇರಲಿ, ಆದಷ್ಟು ಬೇಗ ಬ್ಯಾಡ್ಮಿಂಟನ್ ಗೇಮನ್ನು ಆಡಿಬಿಡೋಣ ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com