Cricket : ಚಂಡಿಮಲ್, ಮ್ಯಾಥ್ಯೂಸ್ ಶತಕ : ಉತ್ತಮ ಮೊತ್ತ ಸೇರಿಸಿದ ಲಂಕಾ

ದೆಹಲಿಯ ಫಿರೋಜ್ ಷಾ ಕೋಟ್ಲಾದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಲಂಕಾ ಉತ್ತಮ ಹೋರಾಟ ನಡೆಸಿದೆ. ಮೂರನೇ ದಿನದಾಟದ ಅಂತ್ಯಕ್ಕೆ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ 9 ವಿಕೆಟ್ ನಷ್ಟಕ್ಕೆ 356 ರನ್ ಸೇರಿಸಿರುವ ಲಂಕಾ ಇನ್ನೂ 180 ರನ್ ಹಿನ್ನಡೆಯಲ್ಲಿದೆ.

ಉತ್ತಮ ಬ್ಯಾಟಿಂಗ್ ನಡೆಸಿ ಶತಕ ಬಾರಿಸಿದ ಏಂಜೆಲೋ ಮ್ಯಾಥ್ಯೂಸ್ 111 ರನ್ ಗಳಿಸಿದರು. ಆಲ್ರೌಂಡರ್ ಏಂಜೆಲೋ ಮ್ಯಾಥ್ಯೂಸ್ 14 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿದರು. ಅಮೋಘ ಶತಕ ದಾಖಲಿಸಿದ ನಾಯಕ ದಿನೇಶ್ ಚಂಡಿಮಲ್ 147 ರನ್ ಗಳಿಸಿ ಅಜೇಯರಾಗುಳಿಸಿದ್ದಾರೆ. ಅದ್ಭುತ ಬ್ಯಾಟಿಂಗ್ ನಡೆಸಿದ ದಿನೇಶ್ ಚಂಡಿಮಲ್ 18 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು.

ಭಾರತದ ಪರವಾಗಿ ಮಹಮ್ಮದ್ ಶಮಿ 2, ಇಶಾಂತ್ ಶರ್ಮಾ 2, ರವೀಂದ್ರ ಜಡೇಜಾ 2, ಆರ್ ಅಶ್ವಿನ್ 3 ವಿಕೆಟ್ ಪಡೆದರು.

Leave a Reply

Your email address will not be published.

Social Media Auto Publish Powered By : XYZScripts.com