Ashes Cricket : ಅಲ್ಪ ಮೊತ್ತಕ್ಕೆ ಇಂಗ್ಲೆಂಡ್ ಆಲೌಟ್ : ಆಸೀಸ್ ಗೆ ಆರಂಭಿಕ ಆಘಾತ

ಅಡಿಲೇಡ್ ಓವಲ್ ನಲ್ಲಿ ನಡೆಯುತ್ತಿರುವ ಎರಡನೇ ಆ್ಯಶಸ್ ಟೆಸ್ಟ್ ಪಂದ್ಯ ರೋಚಕ ಹಂತ ತಲುಪಿದೆ. ಮೊದಲ ಇನ್ನಿಂಗ್ಸ್ ನಲ್ಲಿ 442 ರನ್ ಗಳ ಬೃಹತ್ ಮೊತ್ತ ಸೇರಿಸಿದ್ದ ಆಸ್ಟ್ರೇಲಿಯಾ, ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಆರಂಭಿಕ ಆಘಾತ ಎದುರಿಸಿದೆ.

ಮೂರನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡು 53 ರನ್ ಸೇರಿಸಿದೆ. ಪೀಟರ್ ಹ್ಯಾಂಡ್ಸ್ ಕಾಬ್ ಹಾಗೂ ನೈಟ್ ವಾಚ್ ಮನ್ ಆಗಿ ಬ್ಯಾಟಿಂಗ್ ಮಾಡಲು ಬಂದಿರುವ ನೇಥನ್ ಲಾಯನ್ ಅಜೇಯರಾಗುಳಿದಿದ್ದಾರೆ.

ಇದಕ್ಕೂ ಮುನ್ನ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 227 ಕ್ಕೆ ಆಲೌಟ್ ಆಯಿತು. ಕ್ರಿಸ್ ವೋಕ್ಸ್ (36) ಹಾಗೂ ಕ್ರೇಗ್ ಓವರ್ಟನ್ (41) ಇಂಗ್ಲೆಂಡ್ ತಂಡಕ್ಕೆ ಆಸರೆಯಾದರು. ಆಸ್ಟ್ರೇಲಿಯಾ ಪರವಾಗಿ ನೇಥನ್ ಲಾಯನ್ 4, ಮಿಚೆಲ್ ಸ್ಟಾರ್ಕ್ 3, ಪ್ಯಾಟ್ರಿಕ್ ಕಮಿನ್ಸ್ 2 ಹಾಗೂ ಜೋಶ್ ಹೇಜಲ್ ವುಡ್ 1 ವಿಕೆಟ್ ಪಡೆದರು. ಒಟ್ಟು 268 ರನ್ ಮುನ್ನಡೆಯನ್ನು ಹೊಂದಿರುವ ಆಸ್ಟ್ರೇಲಿಯಾ, ನಾಲ್ಕನೇ ದಿನ ಲೀಡ್ ಹೆಚ್ಚಿಸಿಕೊಳ್ಳಲು ನೋಡಲಿದೆ.

Leave a Reply

Your email address will not be published.

Social Media Auto Publish Powered By : XYZScripts.com