Mumbai : ಬಾಲಿವುಡ್‌ನ ಶ್ರೇಷ್ಠ ನಟ ಶಶಿ ಕಪೂರ್‌ ಇನ್ನಿಲ್ಲ

ಮುಂಬೈ : ಬಾಲಿವುಡ್‌ನ ಖ್ಯಾತ ನಟ ಶಶಿ ಕಪೂರ್ ಸೋಮವಾರ ಸಂಜೆ ವಿಧಿವಶರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿದ್ದು, ಕಳೆದ ಎಂಟು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

1938ರಲ್ಲಿ ಇವರ ಜನನವಾಗಿದ್ದು, ಬಾಲಿವುಡ್‌ನಲ್ಲಿ ಸಾಧನೆ ಮಾಡಿದ್ದರು. ತಮ್ಮ ಅಭಿನಯದ ಮೂಲಕ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಹೊಂದಿದ್ದ ಇವರಿಗೆ 2014ರಲ್ಲಿ ಹೃದಯ ಸಂಬಂಧಿ ಕಾಯಿಲೆ ಬಂದಿತ್ತು. ಅದಕ್ಕೂ ಮುನ್ನ ಅವರಿಗೆ ಬೈಪಾಸ್‌ ಸರ್ಜರಿ ಮಾಡಲಾಗಿತ್ತು.

ಇವರು ಬಾಲಿವುಡ್‌ ಮಾತ್ರವಲ್ಲದೆ ಹಾಲಿವುಡ್‌ ಸಿನಿಮಾಗಳಲ್ಲೂ ಅಭಿನಯಿಸಿ ತಮ್ಮ ಪ್ರತಿಭೆಯನ್ನು ಜಗತ್ತಿಗೆ ತಿಳಿಯುವಂತೆ ಮಾಡಿದ್ದರು. ಅಲ್ಲದೆ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದ ಇವರಿಗೆ 2011ರಲ್ಲಿ ಪದ್ಮಭೂಷಣ ಪ್ರಶಸ್ತಿ, 2014ರಲ್ಲಿ ದಾದಾ ಸಾಹೇಬ್‌ ಪಾಲ್ಕೆ ಪ್ರಶಸ್ತಿ ಲಭಿಸಿತ್ತು. ಇವರು ಒಟ್ಟು 116 ಸಿನಿಮಾಗಳನ್ನು ಮಾಡಿ ಯಶಸ್ವಿ ನಟ ಎನಿಸಿಕೊಂಡಿದ್ದರು.

ಅಲ್ಲದೆ ತಮ್ಮದೇ ಪ್ರೊಡಕ್ಷನ್‌ ಹೌಸ್‌ ಹೊಂದಿದ್ದ ಇವರು, ಇದರಡಿಯಲ್ಲಿ ಉತ್ಸವ್‌, ಜುನೂನ್‌ ಅಜೂಬಾ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.

Leave a Reply

Your email address will not be published.