ಯಡಿಯೂರಪ್ಪನವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ : ಈಶ್ವರಪ್ಪ

ಬಾಗಲಕೋಟೆ : ಪರಿವರ್ತನಾ ಯಾತ್ರೆಯ ವೇಳೆ ಉಂಟಾಗುತ್ತಿರುವ ಭಿನ್ನಮತದ ವಿಚಾರ ಸಂಬಂಧ ಬಿಜೆಪಿ ಮುಖಂಡ ಕೆ.ಎಸ್‌ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

ಪಕ್ಷ ಬೆಳೆಯುತ್ತಿರುವುದರಿಂದ ಅಶಿಸ್ತು, ಗೊಂದಲಗಳಿರುವುದು ಸಹಜ. ಅವುಗಳನ್ನೆಲ್ಲಾ ಬಗೆಹರಿಸಿಕೊಂಡು ಮುನ್ನಡೆಯುತ್ತೇವೆ. ಯಡಿಯೂರಪ್ಪನವರನ್ನ ಮುಂದಿನ ಮುಖ್ಯಮಂತ್ರಿಯನ್ನಾಗಿಸುತ್ತೇವೆ. ಹೋದಲ್ಲೆಲ್ಲಾ ಯಾತ್ರೆ ವೇಳೆ ಚಿಕ್ಕ ಪುಟ್ಟ ಗಲಾಟೆಗಳಾಗ್ತಿರೋದು ಪಕ್ಷ ಅಧಿಕಾರಕ್ಕೆ ಬರುವುದರ ಮುನ್ಸೂಚನೆಯಾಗಿದೆ ಎಂದಿದ್ದಾರೆ.

ಇದೇ ವೇಳೆ ಸಂಸದ ಪ್ರತಾಪ ಸಿಂಹ ಬಂಧನ ವಿಚಾರ ಸಂಬಂದ ಪ್ರತಿಕ್ರಿಯಿಸಿದ್ದು, ಸಿಎಂ, ಹಿಂದೂಗಳಿಗೊಂದು ಮುಸ್ಲಿಂರಿಗೊಂದು ನೀತಿ ಅನುಸರಿಸುತ್ತಿದ್ದಾರೆ.  ಮುಸ್ಲಿಂರ ಕಾಯ೯ಕ್ರಮಕ್ಕೆ ಪ್ರೇರಣೆ ನೀಡಿ, ಹಿಂದೂಗಳ ಹನುಮ ಮತ್ತು ದತ್ತ ಜಯಂತಿಗೆ ಅಡ್ಡಿ ಮಾಡುತ್ತಿರೋದ್ಯಾಕೆ? ಎಂದು ಪ್ರಶ್ನಿಸಿದ್ದಾರೆ. ಅವರು ಅಡ್ಡಿಯಾದ್ದರಿಂದಲೇ ಈ ಸಮಸ್ಯೆ ಉಂಟಾಗಿದೆ. ಹುಣಸೂರಿನ ಕಾಯ೯ಕ್ರಮಕ್ಕೆ ಅನುಮತಿ ನೀಡುವುದರಲ್ಲಿ ತಪ್ಪೇನಿತ್ತು. ಸಿಎಂ ಕಾನೂನನ್ನ ಮುರಿಸುವ ಪ್ರಯತ್ನ ಮಾಡುತ್ತಿದ್ದಾರೆ. ವೀರಶೈವ- ಲಿಂಗಾಯತರನ್ನ ಬೇಪ೯ಡಿಸಿರುವ ಸಿದ್ದರಾಮಯ್ಯ ನಾಡಿನ ಹಿಂದುಗಳ ಕ್ಷಮೆ ಕೇಳಲಿ ಎಂದಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com