ಈ ಮೂರು ರಾಶಿಯವರಿಗೆ ಬುದ್ದಿವಂತಿಕೆ ಹೆಚ್ಚಂತೆ…….ಅದ್ಯಾವ ರಾಶಿ ನೋಡಿ…

ಜ್ಯೋತಿಷ್ಯ ಶಾಸ್ತ್ರದ  ಬಗ್ಗೆ ಭಾರತೀಯರಿಗೆ ನಂಬಿಕೆ ಹೆಚ್ಚು. ಅದರಲ್ಲೂ ರಾಶಿ ಫಲಗಳ ಮೇಲೆ ವ್ಯಕ್ತಿಗಳ ಇರುವಿಕೆ, ನಡವಳಿಕೆ, ಆರ್ಥಿಕ ಪರಿಸ್ಥಿತಿ ಇದೆಲ್ಲವೂ ನಿರ್ಧಾರವಾಗುತ್ತದೆ ಎಂಬ ನಂಬಿಕೆ ಇದೆ. ಒಂದೊಂದು ರಾಶಿಯಲ್ಲಿ ಹುಟ್ಟಿದವರು ಒಂದೊಂದು ರೀತಿಯಲ್ಲಿ ಭಿನ್ನವಾಗಿರುತ್ತಾರೆ.

ಅಂತೆಯೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಮೂರು ರಾಶಿಯಲ್ಲಿ ಹುಟ್ಟಿದವರು ಅತೀ ಬುದ್ದಿವಂತರಾಗಿರುತ್ತಾರಂತೆ. ಆ ರಾಶಿ ಯಾವುದು ಎಂಬುದನ್ನು ನೋಡೋಣ.

ವೃಷಭ : ಈ ರಾಶಿಯಲ್ಲಿ ಜನಿಸಿದವರು ಸದಾ ಉತ್ಸಾಹಿಗಳಾಗಿರುತ್ತಾರೆ. ಅಲ್ಲದೆ ಹೆಚ್ಚಿನ ಬುದ್ದಿವಂತರಾಗಿರುತ್ತಾರೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಅಲ್ಲದೆ ಈ ರಾಶಿಯವರು ಯಾವ ಸಂದರ್ಭದಲ್ಲಿ ಯಾವ ರೀತಿಯ ನಿರ್ಧಾರ ಕೈಗೊಳ್ಳಬೇಕು. ಯಾವ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಲೆಕ್ಕಚಾರ ಹಾಕಿ ಸರಿಯಾಗಿ ನಿರ್ಧಾರ ಕೈಗೊಳ್ಳುತ್ತಾರೆ.

ಮಿಥುನ : ಮಿಥುನ ರಾಶಿಯವರು ಉತ್ತಮ ಸಂವಹನಾಕಾರರಾಗಿರುತ್ತಾರೆ. ತೀಕ್ಣ ಮತಿಗಳಾಗಿರುತ್ತಾರೆ. ಗಣಿತ ವಿಷಯದಲ್ಲಿ ಹಚ್ಚಿನ ಸಾಧನೆ ಮಾಡುತ್ತಾರೆ. ಅಲ್ಲದೆ ಇವರು ಸದಾ ಒಂದಿಲ್ಲೊಂದು ವಿಚಾರದಲ್ಲಿ ಯೋಚನೆ ಮಾಡುತ್ತಲೇ ಇರುತ್ತಾರೆ. ಬಹಳ ಸೂಕ್ಷ್ಮವಾಗಿ ಎಲ್ಲವನ್ನು ಗಮನಿಸುವ ಇವರಿಗೆ ಶತೃಗಳು ಕಡಿಮೆ.

ಕುಂಭ : ಇವರು ಸದಾ ತೂಕಬದ್ದವಾದ ಮಾತುಗಳನ್ನೇ ಆಡುತ್ತಾರೆ. ಸವಾಲಿಗೇ ಸವಾಲು ಹಾಕುವ ಗಟ್ಟಿವಂತರಾಗಿರುತ್ತಾರೆ. ಎಲ್ಲವನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗುವ ಚಾಕಚಕ್ಯತೆ ಇವರಲ್ಲಿರುತ್ತದೆ. ಅಲ್ಲದೆ ಸುಂದರವಾಗಿರುತ್ತಾರೆ. ಎಲ್ಲರಲ್ಲೂ ಸಹಬಾಳ್ವೆಯನ್ನು ಇಷ್ಟಪಡುತ್ತಾ, ಎಲ್ಲರನ್ನೂ ನಗಿಸುತ್ತಾ ಇರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

Leave a Reply

Your email address will not be published.

Social Media Auto Publish Powered By : XYZScripts.com