ಕಿರಿಕ್‌ ಪಾರ್ಟಿ ಆಯ್ತು ಕಿರ್ರಕ್‌ ಪಾರ್ಟಿ : ರಕ್ಷಿತ್‌ ಶೆಟ್ಟಿ ಸಿನಿಮಾ ತೆಲುಗಿನಲ್ಲಿ ರಿಮೇಕ್

ರಕ್ಷಿತ್‌ ಶೆಟ್ಟಿ ಅಭಿನಯದ ಕಿರಿಕ್‌ ಪಾರ್ಟಿ ಸಿನಿಮಾ ಭರ್ಜರಿ ಯಶಸ್ಸನ್ನು ಕಂಡಿತ್ತು. ಈ ಹಿನ್ನೆಲೆಯಲ್ಲಿ ಬೇರೆ ಭಾಷೆಗಳಿಗೆ ರಿಮೇಕ್‌ ಆಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ಕೊನೆಗೂ ಕಿರಿಕ್‌ ಪಾರ್ಟಿ ಸಿನಿಮಾ ತೆಲುಗಿನಲ್ಲಿ ರಿಮೇಕ್‌ ಆಗಲಿದ್ದು, ಇದಕ್ಕೆ ಕಿರ್ರಕ್‌ ಪಾರ್ಟಿ ಎಂದು ಹೆಸರಿಡಲಾಗಿದೆ.

ರಿಮೇಕ್‌ ಸಿನಿಮಾದ ಮೊದಲ ಪೋಸ್ಟರ್‌ ಸಹ ಬಿಡುಗಡೆಯಾಗಿದೆ. ಸಿನಿಮಾಗೆ ಶರಣ್ ಕೋಪಿಶೆಟ್ಟಿ ನಿರ್ದೇಶನವಿದ್ದು, ಅನಿಲ್‌ ಶಂಕರ್‌ ಅವರು ಚಿತ್ರದ ನಿರ್ಮಾಣ ಮಾಡಲಿದ್ದಾರೆ. ಹ್ಯಾಪಿಡೇಸ್ ಖ್ಯಾತಿಯ ನಟ ನಿಖಿಲ್‌ ಸಿದ್ಧಾರ್ಥ್‌ ಸಿನಿಮಾದಲ್ಲಿ ನಾಯಕನಾಯಿ ಅಭಿನಯಿಸುತ್ತಿದ್ದು. ಇದಕ್ಕಾಗಿ 12 ಕೆ.ಜಿ ತೂಕ ಇಳಿಸಿಕೊಂಡಿದ್ದಾರಂತೆ.

ಇನ್ನು ಕಿರಿಕ್‌ ಪಾರ್ಟಿ ಯಶಸ್ಸಿಗೆ ಕಾರಣರಾಗಿದ್ದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್‌ ಹಾಗೂ ಛಾಯಾಗ್ರಾಹಕ ಅದ್ವೈತ ಗುರುಮೂರ್ತಿ ಈ ಸಿನಿಮಾದ ಮೂಲಕ ತೆಲುಗಿಗೆ ಎಂಟ್ರಿ ಕೊಡಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com