ಮಂಡ್ಯದಲ್ಲಿ ಶುರುವಾಗಿದೆ ರಮ್ಯಾ Canteen : ಇಲ್ಲಿ ಏನೇ ತಗೊಂಡ್ರು ಕೇವಲ 10 ರೂ..!

ಮಂಡ್ಯ : ಇಂದಿರಾ ಕ್ಯಾಂಟೀನ್‌, ಅಪ್ಪಾಜಿ ಕ್ಯಾಂಟೀನ್‌ ಮಾದರಿಯಲ್ಲೇ ಮಂಡ್ಯದಲ್ಲಿ ಕುಮಾರಿ ರಮ್ಯಾ ಕ್ಯಾಂಟೀನ್ ಶುರುವಾಗಿದೆ.

ಹೌದು ಮೋಹಕ ತಾರೆ, ಮಂಡ್ಯದ ಮಾಜಿ ಸಂಸದೆ ರಮ್ಯಾ ಮೇಲಿನ ಅಭಿಮಾನಕ್ಕಾಗಿ, ಅಭಿಮಾನಿಯೊಬ್ಬರು ಮಂಡ್ಯದ ಜನರಿಗೆ ಇಂದು ಮುಂಜಾನೆಯಿಂದ ಕ್ಯಾಂಟೀನ್‌ ಶುರು ಮಾಡಿದ್ದಾರೆ. ರಘು ಎಂಬ ರಮ್ಯಾ ಅಭಿಮಾನಿ ಈ ಹೋಟೆಲ್‌ ಮಾಡಿದ್ದು, ಕಳೆದ 15 ವರ್ಷಗಳಿಂದ ರಸ್ತೆ ಬದಿ ಕ್ಯಾಂಟೀನ್ ನಡೆಸುತ್ತಿದ್ದರು. ಈಗ ರಘು ಹೊಸದಾಗಿ ಕ್ಯಾಂಟೀನ್‌ ಶುರು ಮಾಡಿದ್ದು, ಅದಕ್ಕೆ ರಮ್ಯಾ ಹೆಸರಿಟ್ಟಿದ್ದಾರೆ.

ರಮ್ಯಾ ಸಂಸದರಾಗಿದ್ದಾಗ ಒಳ್ಳೆಯ ಕೆಲಸ ಮಾಡಿದ್ದಾರೆ. ಹಳ್ಳಿ ಹಳ್ಳಿಗೆ ಭೇಟಿ ನೀಡಿ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಆದ್ದರಿಂದ ಅವರ ಹೆಸರಿನಲ್ಲೇ ಒಂದು ಕ್ಯಾಂಟೀನ್‌ ನಡೆಸಲು ನಿರ್ಧಾರ ಮಾಡಿರುವುದಾಗಿ ರಘು ಹೇಳಿದ್ದಾರೆ.

ಈ ಹೋಟೆಲ್‌ನಲ್ಲಿ ಮಸಾಲೆ ದೋಸೆ, ಪ್ಲೇನ್ ದೋಸೆ, ಇಡ್ಲಿ, ವಡೆ, ಮುದ್ದೆ, ಅನ್ನ, ಸಾರು ಸೇರಿದಂತೆ ಹಲವಾರು ಸ್ವಾದಿಷ್ಟ ಆಹಾರಗಳು ಕೇವಲ 10 ರೂಗೆ ಲಭ್ಯವಿದೆ. ಮಂಡ್ಯದ ವಿಮ್ಸ್‌ ಆಸ್ಪತ್ರೆಯ ಪಕ್ಕದಲ್ಲೇ ರಮ್ಯಾ ಕ್ಯಾಂಟೀನ್ ಇದ್ದು, ಬಡವರ ಪಾಲಿಗೆ ಈ ಕ್ಯಾಂಟೀನ್‌ ವರದಾನವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com