Politics ನಲ್ಲಿ ಯಾರೂ ಸಾಚಾ ಅಲ್ಲ, ಹರಿಶ್ಚಂದ್ರರಂತೂ ಇಲ್ಲವೇ ಇಲ್ಲ : ಚೆಲುವರಾಯಸ್ವಾಮಿ

ಮಂಡ್ಯ : ಜೆಡಿಎಸ್‌ ಮುಖಂಡ ಚೆಲುವರಾಯಸ್ವಾಮಿ ಕಾಂಗ್ರೆಸ್ ಸೇರ್ಪಡೆ ವಿಚಾರ ಕುರಿತಂತೆ ಹೇಳಿಕೆ ನೀಡಿದ್ದು, ಇನ್ನು 2-3 ದಿನಗಳಲ್ಲಿ ದಿನಾಂಕ ನಿಗಧಿ ಪಡಿಸುವುದಾಗಿ ಹೇಳಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್‌ ಕಮಲದಲ್ಲಿ ಸಿದ್ದರಾಮಯ್ಯ  ಅವರ ಪಾತ್ರವಿದೆ ಎಂದು ಎಚ್‌ಡಿಕೆ ಹೇಳಿಕೆ ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ನಡಹಳ್ಳಿಯನ್ನು ಜೆಡಿಎಸ್‌ಗೆ ಕರೆತಂದವರು ಯಾರು ಎಂದು ಪ್ರಶ್ನಿಸಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಾಂತರ ಮಾಡುವುದು ಸಹಜ. ಇಲ್ಲಿ ಯಾರೂ ಸಾಚಾ ಅಲ್ಲ, ಸತ್ಯ ಹರಿಶ್ಚಂದ್ರರು ಯಾರೂ ಇಲ್ಲ. ಅವರವರ ಪಕ್ಷ ಪ್ರಾಬಲ್ಯಕ್ಕೆ ಈ ರೀತಿ ಮಾಡುವುದು ಸಾಮಾನ್ಯ. ಕುಮಾರಸ್ವಾಮಿ ಆರೋಪದಲ್ಲಿ ಹುರುಳಿಲ್ಲ ಎಂದಿದ್ದಾರೆ.

Leave a Reply

Your email address will not be published.