ಯಡಿಯೂರಪ್ಪ ಭಾಷಣದ ವೇಳೆ ಮೈಕ್ ಕಿತ್ತೆಸೆದ ಬೆಂಬಲಿಗರು…?!!

ಇಂಡಿ : ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ  ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಅವರಿಗೆ ಭಾರೀ ಮುಜುಗರ ಉಂಟಾಗಿದೆ. ಇಂಡಿಯಲ್ಲಿ ನಡೆದ ಸಮಾವೇಶದಲ್ಲಿ ಯಡಿಯೂರಪ್ಪ ಭಾಷಣ ಮಾಡುತ್ತಿದ್ದ ವೇಳೆ ಕಾರ್ಯಕರ್ತರು ಮೈಕ್‌ ಕಿತ್ತು ಹಾಕಿರುವ ಪ್ರಸಂಗ ನಡೆದಿದೆ.

ಸಮಾವೇಶವನ್ನು ಯಶಸ್ವಿಯಾಗಿಸಬೇಕು ಎಂಬ ಹಿನ್ನೆಲೆಯಲ್ಲಿ ಹಾಗೂ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಅನೇಕ ಮಂದಿಯನ್ನ ಸಮಾವೇಶಕ್ಕೆ ಕರೆತಂದಿದ್ದರು. ಆದರೆ ಬಿಎಸ್‌ವೈ ರವಿಕಾಂತ್ ಪಾಟೀಲ್‌ ಅವರನ್ನು ಹೊಗಳುತ್ತಿದ್ದಂತೆ ಕೋಪಗೊಂಡ ಇಂಡಿಯ ಮಂಡಲ್‌ ಅಧ್ಯಕ್ಷ ಕಾಸುಗೌಡ, ಪಾಪು ಕಿತ್ತಲಿ, ದಯಾಸಾಗರ್‌ ಪಾಟೀಲ್ ಬೆಂಬಲಿಗರು ಏಕಾಏಕಿ ವೇದಿಕೆ ಮೇಲೇರಿ ಮೈಕ್‌ ಕಿತ್ತು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಕ್ಷಣವೇ ಬಿಎಸ್‌ವೈ, ಇಲ್ಲಿ ಯಾರನ್ನೂ ಹೊಗಳಿಲ್ಲ. ಯಾರನ್ನೂ ತೆಗಳಿಲ್ಲ. ಇಷ್ಟು ಮಂದಿ ಆಗಮಿಸಲು ಎಲ್ಲರ ಶ್ರಮ ಕಾಣುತ್ತಿದೆ. ಯಾರೂ ಗಲಾಟೆ ಮಾಡಬೇಡಿ. ಟಿಕೆಟ್‌ ನೀಡುವ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಹೇಳಿದ ಕೂಡಲೆ ವೇದಿಕೆ ಮೇಲಿಂದ ಕೆಳಗಿಳಿದಿದ್ದಾರೆ. ಬಳಿಕ 10 ನಿಮಿಷ ಕಾಲ ಮಾತ್ರ ಮಾತನಾಡಿ ತಮ್ಮ ಭಾಷಣ ಮುಗಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com