ಮತ್ತೆ ತೆರೆ ಮೇಲೆ “ಬುಲ್‌ ಬುಲ್‌” ಜೋಡಿ.. : This is “ದಚ್ಚು ರಚ್ಚು” Love story…?

ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ಸದ್ಯ ಕುರುಕ್ಷೇತ್ರ ಸಿನಿಮಾದಲ್ಲಿ ಫುಲ್‌ ಬ್ಯುಸಿಯಾಗಿದ್ದಾರೆ. ಕಳೆದ ವರ್ಷದಿಂದಲೂ ದರ್ಶನ್‌ ಅವರ 51ನೇ ಸಿನಿಮಾ ಯಾವುದು, ಆ ಸಿನಿಮಾದ ನಾಯಕಿ ಯಾರಾಗುತ್ತಾರೆ ಎಂಬ ಕುರಿತು ಅಭಿಮಾನಿಗಳಲ್ಲಿ ಕುತೂಹಲ ಇದ್ದೇ ಇದೆ.

ಈ ಕುತೂಹಲಕ್ಕೆ ಈಗ ತೆರೆ ಬಿದ್ದಿದ್ದು, ದರ್ಶನ್‌ ಅವರ 51ನೇ ಸಿನಿಮಾವನ್ನು ಬಿ.ಸುರೇಶ್‌ ಹಾಗೂ ಶೈಲಜಾ ನಾಗ್ ನಿರ್ಮಾಣ ಮಾಡಲಿದ್ದಾರೆ. ಇನ್ನು ಸಿನಿಮಾದ ನಿರ್ದೇಶನವನ್ನು ಪಿ. ಕುಮಾರ್ ನಿರ್ವಹಿಸಲಿದ್ದಾರೆ.

ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲವಂತೆ. ಸದ್ಯ ಕಲಾವಿದರ ಆಯ್ಕೆ ಕೆಲಸ ನಡೆಯುತ್ತಿದೆ. ಆದರೆ ಸಿನಿಮಾದ ನಾಯಕಿಯಾಗಿ ರಚಿತಾ ರಾಂ ನಟಿಸಲಿದ್ದಾರೆ ಎಂದು ಗಾಂಧಿನಗರದ ತುಂಬ ಗುಲ್ಲೆದ್ದಿದೆ.

ಸಿನಿಮಾದ ಬಗ್ಗೆ ರಚಿತಾ ರಾಂ ಬಳಿ ಒಂದು ಸುತ್ತಿನ ಮಾತುಕತೆ ನಡೆದಿದೆ. ಇನ್ನು ರಚಿತಾ ಈ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಡುವುದೊಂದೇ ಬಾಕಿ ಇದೆ.

 

Leave a Reply

Your email address will not be published.

Social Media Auto Publish Powered By : XYZScripts.com