Cricket : ಭಾರತದ ಬೃಹತ್ ಮೊತ್ತ : ಲಂಕಾಗೆ ಮ್ಯಾಥ್ಯೂಸ್, ಚಂಡಿಮಲ್ ಆಸರೆ

ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಮೇಲುಗೈ ಸಾಧಿಸಿದೆ. ಎರಡನೇ ದಿನವಾದ ರವಿವಾರ ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 536 ರನ್ ಗಳ ಬೃಹತ್ ಮೊತ್ತವನ್ನು ಸೇರಿಸಿ ಡಿಕ್ಲೇರ್ ಮಾಡಿಕೊಂಡಿತು.

ಮೊದಲ ದಿನದಾಟದ ಅಂತ್ಯಕ್ಕೆ ಅಜೇಯರಾಗುಳಿದಿದ್ದ ನಾಯಕ ವಿರಾಟ್ ಕೊಹ್ಲಿ ರವಿವಾರ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದ 6 ನೇ ದ್ವಿಶತಕ ದಾಖಲಿಸಿದರು. 287 ಎಸೆತಗಳನ್ನೆದುರಿಸಿದ ವಿರಾಟ್ ಕೊಹ್ಲಿ  243 ರನ್ ಗಳಿಸಿ 25 ಬೌಂಡರಿಗಳನ್ನು ಬಾರಿಸಿದರು. ಅರ್ಧಶತಕ ಸಿಡಿಸಿದ ರೋಹಿತ್ ಶರ್ಮಾ 65 ರನ್ ಬಾರಿಸಿದರು.

ಎರಡನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ವಿಕೆಟ್ ನಷ್ಟಕ್ಕೆ ಸೇರಿಸಿದೆ. ಭಾರತದ ಪರವಾಗಿ ಇಶಾಂತ್ ಶರ್ಮಾ, ರವೀಂದ್ರ ಜಡೇಜಾ ಹಾಗೂ ಮಹಮ್ಮದ್ ಶಮಿ ತಲಾ 1 ವಿಕೆಟ್ ಪಡೆದರು.

 

Leave a Reply

Your email address will not be published.

Social Media Auto Publish Powered By : XYZScripts.com