Ashes Cricket : ಶಾನ್ ಮಾರ್ಷ್ ಅಜೇಯ ಶತಕ : ಬೃಹತ್ ಮೊತ್ತ ಸೇರಿಸಿದ ಆಸೀಸ್

ಅಡಿಲೇಡ್ ಓವಲ್ ನಲ್ಲಿ ನಡೆಯುತ್ತಿರುವ ಎರಡನೇ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 442 ರನ್ ಗಳ ಬೃಹತ್ ಮೊತ್ತ ಸೇರಿಸಿದೆ.

ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಆಸ್ಟ್ರೇಲಿಯಾ ಬ್ಯಾಟ್ಸಮನ್ ಶಾನ್ ಮಾರ್ಷ್ ಶತಕ ಬಾರಿಸಿದರು. 126 ರನ್ ಗಳಿಸಿದ ಶಾನ್ ಮಾರ್ಷ್ 15 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು. ಟಿಮ್ ಪೇನ್ 57 ಹಾಗೂ ಪ್ಯಾಟ್ರಿಕ್ ಕಮಿನ್ಸ್ 44 ರನ್ ಸೇರಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಸಹಕಾರಿಯಾದರು. ಇಂಗ್ಲೆಂಡ್ ಪರವಾಗಿ ಕ್ರೇಗ್ ಓವರ್ಟನ್ 3 ಹಾಗೂ ಸ್ಟುವರ್ಟ್ ಬ್ರಾಡ್ 2 ವಿಕೆಟ್ ಪಡೆದರು.

ಮೊದಲ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಗೆ, ಮಾರ್ಕ್ ಸ್ಟೋನ್ ಮನ್ ವಿಕೆಟ್ ಪಡೆದು ಮಿಚೆಲ್ ಸ್ಟಾರ್ಕ್ ಆಘಾತ ನೀಡಿದರು. ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 1 ವಿಕೆಟ್ ಕಳೆದುಕೊಂಡು 29 ರನ್ ಸೇರಿಸಿದ್ದು, 413 ರನ್ ಹಿನ್ನಡೆಯಲ್ಲಿದೆ. ಅಲಿಸ್ಟರ್ ಕುಕ್ ಹಾಗೂ ಜೇಮ್ಸ್ ವಿನ್ಸ್ ನಾಟೌಟ್ ಆಗಿ ಉಳಿದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com