ದತ್ತ ಜಯಂತಿ ಹಿನ್ನೆಲೆ : ಬಾಬಾ ಬುಡನ್‌ಗಿರಿಯಲ್ಲಿ ಗಲಾಟೆ : ಲಘು ಲಾಠಿ ಪ್ರಹಾರ

ಚಿಕ್ಕಮಗಳೂರು : ದತ್ತಪೀಠ ಬಾಬಾಬುಡನ್‌ಗಿರಿಯಲ್ಲಿ ಭಾನುವಾರ ದತ್ತ ಪಾದುಕೆ ದರ್ಶನದ ವೇಳೆ ಗಲಾಟೆ ನಡೆದಿದೆ. ಚಿಕ್ಕಮಗಳೂರಿನ ಸೂಕ್ಷ್ಮಾತಿಸೂಕ್ಷ್ಮ ಪ್ರದೇಶವೆಂದೇ ಕರೆಯಲಾಗುವ ದತ್ತ ಪೀಠದಲ್ಲಿ ಬಾವುಟ ನೆಡುವ ವಿಚಾರ ಸಂಬಂಧ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸಾವಿರಾರು ಮಂದಿ ಬಿಜೆಪಿ, ಸಂಘಪರಿವಾರದ ಕಾರ್ಯಕರ್ತರು ದತ್ತ ಜಯಂತಿ ಹಿನ್ನೆಲೆಯಲ್ಲಿ ಬಾಬಾ ಬುಡನ್‌ಗಿರಿಗೆ ಆಗಮಿಸಿದ್ದು, ಈ ವೇಳೆ ಗಲಾಟೆ ನಡೆದಿದೆ. ಕೂಡಲೆ ಅಲ್ಲಿದ್ದ ಮಾಲಾಧಾರಿಗಳನ್ನು ಪೊಲೀಸರು ಚದುರಿಸಿದ್ದಾರೆ

ಸ್ಥಳದಲ್ಲಿ ಎಸ್‌.ಪಿ ಅಣ್ಣಾಮಲೈ, ದಕ್ಷಿಣ ವಲಯ ಡಿಜಿಪಿ ಹೇಮಂತ್ ನಿಂಬಾಳ್ಕರ್‌ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ನಿಯಂತ್ರಿಸುವ ಕೆಲಸ ನಡೆಯುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com