ಇಸ್ಲಾಮ್ ಹೆಸರಲ್ಲಿ ಮುಸ್ಲಿಂ ಮಹಿಳೆಯರ ಮೇಲಾಗುತ್ತಿರುವ ಅನ್ಯಾಯ ನಿಲ್ಲಿಸಿ : ರಾಮದೇವ್

‘ ಇಸ್ಲಾಮ್ ಧರ್ಮದ ಹೆಸರಿನಲ್ಲಿ ಮುಸ್ಲಿಂ ಮಹಿಳೆಯರ ಮೇಲಾಗುತ್ತಿರುವ ಅನ್ಯಾಯವನ್ನು ನಿಲ್ಲಿಸಿ ‘ ಎಂದು ಯೋಗಗುರು ಬಾಬಾ ರಾಮದೇವ್ ಹೇಳಿದ್ದಾರೆ.  ತ್ರಿವಳಿ ತಲಾಖ್ ವಿರುದ್ಧ ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಮಸೂದೆಯವನ್ನು ಬೆಂಬಲಿಸಿ ಮಾತನಾಡಿರುವ ಬಾಬಾ ರಾಮದೇವ್, ‘ ಮುಸ್ಲಿಂ ಮಹಿಳೆಯರ ಗೌರವ ಕಾಪಾಡುವ ಉದ್ದೇಶಕ್ಕಾಗಿ ಹಾಗೂ ಲಾಭಕ್ಕಾಗಿ ಈ ಮಸೂದೆಯನ್ನು ಪ್ರಸ್ತಾಪಿಸಲಾಗಿದೆ. ಜನರು ಕೇಂದ್ರದ ಈ ನಿರ್ಧಾರವನ್ನು ಸ್ವಾಗತಿಸಬೇಕು ‘ ಎಂದು ಹೇಳಿದ್ದಾರೆ.

ಹೆಂಡತಿಗೆ ಒಂದೇ ಸಲಕ್ಕೆ ಮೂರು ಬಾರಿ ತಲಾಖ್ ಹೇಳಿ ವಿಚ್ಛೇದನ ನೀಡುವುದರ ವಿರುದ್ಧ ಈ ಕಾಯಿದೆಯನ್ನು ಪ್ರಸ್ತಾಪಿಸಲಾಗಿದೆ. ಈ ನಿಯಮವನ್ನು ಉಲ್ಲಂಘಿಸಿದ ವ್ಯಕ್ತಿಗೆ ಮೂರು ವರ್ಷ ಜೈಲುವಾಸ ಶಿಕ್ಷೆಯನ್ನು ವಿಧಿಸುವ ಬಗ್ಗೆಯೂ ನಿಯಮದಲ್ಲಿ ಹೇಳಲಾಗಿದೆ.

ತ್ರಿವಳಿ ತಲಾಖ್ ವಿರುದ್ಧ ಕೇಂದ್ರದ ಈ ನಿರ್ಧಾರವನ್ನು ಎಐಎಮ್ಐಎಮ್ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೇರಿದಂತೆ ಅನೇಕ ಜನ ಮೌಲ್ವಿಗಳು ವಿರೋಧಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com