ಈ ಐದು ರಾಶಿಯವರು 30 ವರ್ಷದೊಳಗೆ ಶ್ರೀಮಂತರಾಗುವುದು ಸತ್ಯ….?!!

ನಮ್ಮ ಬಳಿ ಹೆಚ್ಚು ಹಣವಿರಬೇಕು. ನಾವು ಬೇಕಾದದ್ದನ್ನೆಲ್ಲ ಕೊಂಡುಕೊಳ್ಳಬೇಕು ಎಂಬ ಆಸೆ ಯಾರಿಗೆ ತಾನೆ ಇರುವುದಿಲ್ಲ ಹೇಳಿ. ಆದರೆ ಕೆಲವೊಂದು ಗ್ರಹಗತಿಗಳ ದೋಷದ ಪರಿಣಾಮ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಇನ್ನು ಕೆಲವರ ಜನ್ಮರಾಶಿ, ಜನ್ಮ ನಕ್ಷತ್ರ ಉತ್ತಮವಾಗಿದ್ದು, ಉತ್ತಮವಾಗಿ ಜೀವನ ನಿರ್ವಹಣೆ ಮಾಡುತ್ತಿರುತ್ತಾರೆ.

ಆರ್ಥಿಕ ಸಂಕಷ್ಟ, ಜೀವನದಲ್ಲಿ ಕಷ್ಟ-ಸುಖ ಇದೆಲ್ಲವುಗಳಿಗೂ ಗ್ರಹಗತಿಗಳೇ ಕಾರಣ ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತದೆ. ಕೆಲವರು ಹುಟ್ಟುತ್ತಲೇ ಶ್ರೀಮಂತರಾಗಿರುತ್ತಾರೆ. ಇನ್ನೂ ಕೆಲವರು ಮೊದಲು ಕಷ್ಟ ಅನುಭವಿಸಿ ನಂತರ ಉತ್ತಮ ಸ್ಥಿತಿ ತಲುಪುತ್ತಾರೆ. ಜೀವನದಲ್ಲಿ ಏನೇ ಆದರೂ ಅದಕ್ಕೆ ಗ್ರಹ ಗತಿಗಳು ಕಾರಣ ಎನ್ನುತ್ತದೆ ಜ್ಯೋತಿಶ್ಯ ಶಾಸ್ತ್ರ.

ಕೆಲವು ರಾಶಿಗಳಲ್ಲಿ ಜನಿಸಿದ ವ್ಯಕ್ತಿಗಳು ಅದೃಶ್ಯವಂತರಾಗಿರುತ್ತಾರೆ. ಆ ರಾಶಿಗಳ ಜನರು ಹೆಚ್ಚು ಖುಷಿ, ಹಾಗೂ ಶ್ರೀಮಂತಿಕೆಯನ್ನು ಅನುಭವಿಸುತ್ತಾರೆ. 12 ರಾಶಿಗಳಲ್ಲಿ 5 ರಾಶಿಗಳವರು ಅದೃಷ್ಟವಂತರಾಗಿರುತ್ತಾರೆ. ಈ ರಾಶಿಯವರು 30 ವರ್ಷದೊಳಗೆ ದೊಡ್ಡ ಸಾಧನೆ ಹಾಗೂ ಸಿರಿವಂತಿಕೆಯನ್ನು ಅನುಭವಿಸುತ್ತಾರಂತೆ . ಆ ರಾಶಿಗಳು ಯಾವುವು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಕನ್ಯಾ ರಾಶಿ : ಈ ರಾಶಿಯವರು ದೃಢ ನಿರ್ಧಾರ ಕೈಗೊಳ್ಳುತ್ತಾರೆ. ತಾವು ಮಾಡುವ ಕಲಸವನ್ನು ಸಂಪೂರ್ಣವಾಗಿ ಮಾಡಿ ಮುಗಿಸುತ್ತಾರೆ. ಏನೇ ಕೆಲಸ ಮಾಡಿದರೂ ಶ್ರದ್ಧೆಯಿಂದ ಮಾಡುತ್ತಾರೆ. ಸಾಧನೆ ಮಾಡುವ ಸಲುವಾಗಿ ಪೂರ್ವ ತಯಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಇವರಿಗೆ ಭೂಮಿ ಅದೃಷ್ಟವಾಗಿದ್ದು, ಭೂಮಿಯ ಮೇಲೆ ಹೂಡಿಕೆ ಮಾಡಿದರೆ ಅಧಿಕ ಲಾಭ ಹಾಗೂ ಶ್ರೇಯಸ್ಸನ್ನು ಗಳಿಸುತ್ತಾರೆ.

ವೃಷಭ : ಇವರು ಶ್ರಮಜೀವಿಗಳಾಗಿರುತ್ತಾರೆ. ಶ್ರಮದಿಂದಲೇ ಹಣ ಗಳಿಸುವ ಬಗ್ಗೆ ಸದಾ ಯೋಚನೆ ಮಾಡುತ್ತಾರೆ. ಜೀವನದಲ್ಲಿ ಸದಾ ಖುಷಿಯಾಗಿರುವ ಬಗ್ಗೆ ಯೋಚನೆ ಮಾಡುತ್ತಾರೆ. ಯಾವ ಕೆಲಸ ಮಾಡಬೇಕು, ಯಾವುದು ಮಾಡಬಾರದು ಎಂಬುದು ಇವರಿಗೆ ಚೆನ್ನಾಗಿ ಅರಿವಿರುತ್ತದೆ. ವಿನಮ್ರ ಗುಣದವರಾಗಿರುತ್ತಾರೆ. ನಿಷ್ಠಾವಂತಿಕೆ, ಬುದ್ದಿವಂತಿಕೆ, ಅವಲಂಬಿಗಳಾಗಿರುತ್ತಾರೆ.

ಪ್ರತೀ ವಿಚಾರದ ಬಗ್ಗೆಯೂ ತಾರ್ಕಿಯ ಹಾಗೂ ಪ್ರಾಯೋಗಿಕವಾಗಿ ಯೋಚಿಸುತ್ತಾರೆ. ತಮ್ಮ ಜೀವನಕ್ಕೆ ಬೇಕಾಗಿರುವಉತ್ತಮ ವಸ್ತುಗಳನ್ನು ಮಾತ್ರ ಬಯಸುತ್ತಾರೆ. ಇವರು ಹೆಚ್ಚು ಹಣ ಉಳಿತಾಯ ಮಾಡುತ್ತಾರೆ. ತಮ್ಮ ಕನಸುಗಳನ್ನು ಸಾಕಾರಗೊಳಿಸಲು ತಾಳ್ಮೆ ಹಾಗೂ ನಿರಂತರವಾಗಿ ಕೆಲಸ ಮಾಡುತ್ತಾರೆ.

 ವೃಶ್ಚಿಕ : ಈ ರಾಶಿಯವರು ಅತೀಂದ್ರಿಯ ಸಾಮರ್ಥ್ಯ ಹೊಂದಿರುತ್ತಾರೆ. ಇವರಲ್ಲಿರುವ ಆತ್ಮವಿಶ್ವಾಸವೊಂದೇ ಎಲ್ಲವನ್ನು ಸಾಧಿಸಲು ಸಹಾಯ ಮಾಡುತ್ತದೆಯ ಶೈಕ್ಷಣಿಕವಾಗಿ ಉತ್ತಮ ಯಶಸ್ಸು ಗಳಿಸುವ ಇವರು, ಚಿಕ್ಕ ವಯಸ್ಸಿನಲ್ಲೇ ಶ್ರೀಮಂತರಾಗುತ್ತಾರೆ. ಇವರಿಗೆ ಎಲ್ಲವೂ ಸುಲಭವಾಗಿ ಸಿಗುತ್ತದೆ.ತಮ್ಮ ತಪ್ಪುಗಳಿಂದುಂಟಾದ ಪರಿಣಾಮದ ಬಗ್ಗೆ ಎಚ್ಚೆತ್ತು, ಸೂಕ್ತ ರೀತಿಯಲ್ಲಿ ಪಾಠ ಕಲಿಯುತ್ತಾರೆ. ಸ್ಪರ್ಧಾತ್ಮಕ ಸ್ವಭಾವದವರಾಗಿರುತ್ತಾರೆ.

ಸಿಂಹ : ಇವರು ಅತ್ಯಂತ ಶಕ್ತಿಶಾಲಿಗಳಾಗಿರುತ್ತಾರೆ. ಉತ್ಸಾಹಿಗಳು, ಆಶಾವಾದಿಗಳು, ಇನ್ನೊಬ್ಬರನ್ನು ರಂಜಿಸುವ ಗುಣ ಹೊಂದಿರುತ್ತಾರೆ. ತಮ್ಮ ಜೊತೆ ಇತರರನ್ನೂ ಮುನ್ನೆಡೆಸುವ ಸಾಮರ್ಥ್ಯ ಇವರಿಗಿರುತ್ತದೆ. ಸರಿಯಾದ ಕಾಲಕ್ಕೆ ಸರಿಯಾದ ನಿರ್ಧಾರ ಕೈಗೊಳ್ಳುತ್ತಾರೆ. ಇವರಿಗೆ ಸ್ವಲ್ಪ ಅಹಂಕಾರ ಹಾಗೂ ckj ಮನೋಭಾವನೆ ಇರುತ್ತದೆ. ಇವರಿಗೆ ಹೆಚ್ಚಿನ ಅವಕಾಶಗಳು ಲಭಿಸುತ್ತವೆ.

ಮಕರ : ವಾಸ್ತವದ ವಿಚಾರಗಳಿಗೆ ಮಹತ್ವ ನೀಡುವ ಇವರು ಬುದ್ದಿವಂತರಾಗಿರುತ್ತಾರೆ. ದೊಡ್ಡ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮುನ್ನ ಹಲವು ಬಾರಿ ಯೋಚಿಸುತ್ತಾರೆ. ಇವರು ಭಾವನಾತ್ಮಕ ಜೀವಿಗಳಾಗಿರುತ್ತಾರೆ. ಯಾವುದೇ ಕೆಲಸದಲ್ಲಾದರೂ ಅತ್ಯಂತ ಜಾಗರೂಕತೆಯಿಂದ, ಚಾಣಾಕ್ಷತೆಯಿಂದ ವರ್ತಿಸುತ್ತಾರೆ. ಇವರು ಸದಾ ಆರ್ಥಿಕ ಭದ್ರತೆ ಹಾಗೂ ಸ್ಥಿರತೆ ಬಯಸುತ್ತಾರೆ. ಇವರು ಜೀವನ ಪೂರ್ತಿ ಶಿಸ್ತಿನಿಂದರಲು ಬಯಸುತ್ತಾರೆ.

 

 

 

 

 

 

 

 

 

 

 

Leave a Reply

Your email address will not be published.

Social Media Auto Publish Powered By : XYZScripts.com