CRICKET : ಕೋಟ್ಲಾದಲ್ಲಿ ವಿರಾಟ್ ಶತಕ : ಟೆಸ್ಟ್ ನಲ್ಲಿ 5000 ರನ್ ಗಡಿ ದಾಟಿದ ಕೊಹ್ಲಿ

ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ 5000 ರನ್ ಪೂರೈಸಿದ್ದಾರೆ. ಸುರಂಗ ಲಕ್ಮಲ್ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 5000 ರನ್ ಪೂರೈಸಿದ 11 ನೇ ಭಾರತೀಯ ಬ್ಯಾಟ್ಸಮನ್ ಎನಿಸಿಕೊಂಡಿದ್ದಾರೆ.

Image result for kohli 5000 test runs

63ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ವಿರಾಟ್ ಕೊಹ್ಲಿ 105 ಇನ್ನಿಂಗ್ಸ್ ಗಳನ್ನು ಆಡಿ 5000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ 95, ವೀರೇಂದ್ರ ಸೆಹ್ವಾಗ್ 98, ಸಚಿನ್ ತೆಂಡೂಲ್ಕರ್ 103 ಇನ್ನಿಂಗ್ಸ್ ಗಳಲ್ಲಿ 5000 ರನ್ ಗಡಿ ದಾಟಿದ್ದರು. ಸ್ಟೀವ್ ಸ್ಮಿತ್ 97, ಹಾಶಿಮ್ ಆಮ್ಲ 109, ಕೇನ್ ವಿಲಿಯಮ್ಸನ್ 110 ಇನ್ನಿಂಗ್ಸ್ ಗಳಲ್ಲಿ 5000 ರನ್ ಗಡಿಯನ್ನು ದಾಟಿದ್ದರು.

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೂರನೇ ಶತಕ ದಾಖಲಿಸಿರುವ ವಿರಾಟ್ ಟೆಸ್ಟ್ ಕ್ರಿಕೆಟ್ ನಲ್ಲಿ 20 ನೇ ಶತಕ ಸಿಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com