BJP ನಾಯಕರ ವಿರುದ್ದ ವರದಿ : ಪತ್ರಕರ್ತನ ಮರ್ಮಾಂಗಕ್ಕೆ ಒದ್ದ ಗೂಂಡಾಗಳು

ತುಮಕೂರು : ಪತ್ರಿಕಾಗೋಷ್ಠಿ ನೆಪದಲ್ಲಿ ವರದಿಗಾರರೊಬ್ಬರನ್ನು ಕರೆಸಿ ಅವರ ಮೇಲೆ ಬಿಜೆಪಿ ಮುಖಂಡರೊಬ್ಬರು ಹಲ್ಲೆ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಹಲ್ಲೆಗೊಳಗಾದ ಪತ್ರಕರ್ತ ಖಾಸಗಿ ವಾಹಿನಿಯ ವರದಿಗಾರ ವಾಗೀಶ್‌ ಎಂದು ತಿಳಿದುಬಂದಿದೆ.

ಬೆಳಗ್ಗೆ 9.30ಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿ ಗಣೇಶ್‌ ಎಂಬುವವರು ಪತ್ರಿಕಾಗೋಷ್ಠಿ ಕರೆದಿದ್ದರು. ಈ ವೇಳೆ ವಾಗೀಶ್‌ ಅವರೂ ಪತ್ರಿಕಾಗೋಷ್ಠಿಗೆಂದು ಆಗಮಿಸಿದ್ದರು. ಅವರು ಬರುತ್ತಿದ್ದಂತೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಬ್ಬಾಕ ರವಿ ಹಾಗೂ ಮಹಾನಗರ ಪಾಲಿಕೆ ಸದಸ್ಯ ಬಾವಿಕಟ್ಟೆ ನಾಗಣ್ಣ ಎಂಬುವವರು ತಮ್ಮ ಜೊತೆಗಾರರನ್ನು ಸೇರಿಸಿಕೊಂಡು ಏಕಾಏಕಿ ವಾಗೀಶ್ ಅವರ ಮೇಲೆ ಹಲ್ಲೆ ಮಾಡಿದ್ದು, ಬಟ್ಟೆ ಹರಿದು, ಅವರ ಮರ್ಮಾಂಗಕ್ಕೆ ಒದ್ದಿದ್ದಾರೆ.

ಬಿಜೆಪಿ ಮುಖಂಡರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ವಾಗೀಶ್‌ ಬಿಜೆಪಿ ನಾಯಕರ ವಿರುದ್ದ ವರದಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಾಗೀಶ್‌ ಅವರಿಗೆ ಗೂಂಡಾಗಳು ಬೆದರಿಕೆ ಹಾಕಿದ್ದವು. ಆದರೆ ಅದ್ಯಾವುದಕ್ಕೂ ಜಗ್ಗದೆ ವರದಿ ಮಾಡಿದ್ದ ವಾಗೀಶ್‌ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

Leave a Reply

Your email address will not be published.