ಓಖಿ ಚಂಡಾರ್ಭಟ : ಸಮುದ್ರಪಾಲಾದ 2 ಹಡಗುಗಳು ; 14 ಮಂದಿಯ ರಕ್ಷಣೆ

ಮಂಗಳೂರು : ಓಖಿ ಚಂಡಮಾರುತದ ಅಬ್ಬರದಿಂದಾಗಿದ ಮಂಗಳೂರಿನ ಹಡಗುಗಳೆರಡು ಅರಬ್ಬೀಸಮುದ್ರದಲ್ಲಿ ಮುಳುಗಡೆಯಾಗಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ತೀವ್ರ ಗೊಳಿಸಲಾಗಿದ್ದು, 16 ಮಂದಿಯನ್ನು ರಕ್ಷಣೆ ಮಾಡಲಾಗಿದೆ.

ನವೆಂಬರ್‌ 30ರಂದು ಎರಡು ಹಡಗುಗಳು ಮಂಗಳೂರಿನಿಂದ ಜಲ್ಲಿ, ಎಂ ಸ್ಯಾಂಟ್‌ ಮತ್ತು ದಿನಸಿ ವಸ್ತುಗಳನ್ನು ತುಂಬಿಕೊಂಡು ಲಕ್ಷದ್ವೀಪ್ಕೆ ಹೊರಟಿದ್ದವು. ಇದರಲ್ಲಿ ಒಟ್ಟು14 ಮಂದಿ ಸಿಬ್ಬಂದಿ ಇದ್ದರು. ಓಖಿ ಅಬ್ಬರದಿಂದಾಗಿ ಸಮುದ್ರದಲ್ಲಿ ಅಲೆಗಳ ಪ್ರಭಾವ ಹೆಚ್ಚಾದ ಕಾರಣ ಹಡಗುಗಳು ಮುಳುಗಡೆಯಾಗಿವೆ.

ಆ ಪೈಕಿ ಒಂದು ಬೋಟ್‌ನಲ್ಲಿದ್ದ 6 ಮಂದಿಯನ್ನು ಕೋಸ್ಟಲ್‌ ಗಾರ್ಡ್‌ ಸಿಬ್ಬಂದಿ ಶುಕ್ರವಾರ ರಕ್ಷಣೆ ಮಾಡಿದ್ದರು. ಇನ್ನುಳಿದ 8 ಮಂದಿಯನ್ನು ಶನಿವಾರ ಮುಂಜಾನೆಯೇ ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

 

 

 

Leave a Reply

Your email address will not be published.