ಸೀರಿಯಲ್‌ ಗೀಳಿಗೆ ಬಾಲಕಿ ಬಲಿ ಪ್ರಕರಣ : TV ಒಡೆದು ಪೋಷಕರ ಆಕ್ರೋಶ

ದಾವಣಗೆರೆ : ಧಾರಾವಾಹಿ ಗೀಳಿಗೆ ಬಲಿಯಾದ ದಾವಣಗೆರೆಯ 7 ವರ್ಷದ ಪ್ರಾರ್ಥನಾ ಸಾವಿನ ಹಿನ್ನೆಲೆಯಲ್ಲಿ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 11ನೇ ತಾರೀಕು ಮಗು ಸಾವಿಗೀಡಾದ ಘಟನೆಯಿಂದ ಇನ್ನೂ ಹೊರ ಬರದ ಕುಟುಂಬಸ್ಥರು, ಟಿವಿಯನ್ನು ಒಡೆದುಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದಾ ನಗುತ್ತಾ ಓಡಾಡುತ್ತಿದ್ದ ಪ್ರಾರ್ಥನಾ ಟಿವಿಯಿಂದಾಗಿ ಸಾವಿಗೀಡಾಗಿದ್ದಾಳೆ. ಸೀರಿಯಲ್‌ ನೋಡಿ ಅದರಂತೆ ಅನುಕರಣೆ ಮಾಡಲು ಹೋಗಿ ಸಾವನ್ನಪ್ಪಿರುವುದಕ್ಕೆ ಟಿವಿಯೇ ಕಾರಣ ಎಂದು ಪ್ರಾರ್ಥನಾ ತಂದೆ ಮಂಜುನಾಥ್‌ ಟಿವಿಯನ್ನು ಒಡೆದುಹಾಕಿದ್ದಾರೆ.

ಧಾರಾವಾಹಿ ಹಾಗೂ ನಿರ್ದೇಶಕರ ಮೇಲೆ ಕೇಸ್‌ ದಾಖಲಿಸುವಂತೆ ಅನೇಕರು ಹೇಳಿದ್ದರು. ಆದರೆ ಪ್ರಾರ್ಥನಾ ಪೋಷಕರು ಕೂಲಿ ಮಾಡಿ ಬದುಕುತ್ತಿದ್ದು, ನಮಗೆ ಕೋರ್ಟು ಕಚೇರಿ ಎಂದು ಓಡಾಡಲು ಸಾಧ್ಯವಿಲ್ಲ. ಇನ್ನುಳಿದ ಇಬ್ಬರು ಮಕ್ಕಳನ್ನು ಜೋಪಾನವಾಗಿ ಸಾಕುತ್ತೇವೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com