Cricket : ಶತಕ ಬಾರಿಸಿದ ವಿರಾಟ್, ವಿಜಯ್ : ಬೃಹತ್ ಮೊತ್ತದತ್ತ ಭಾರತ

ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತದತ್ತ ಸಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 371 ರನ್ ಸೇರಿಸಿದೆ.

ಭರ್ಜರಿ ಶತಕ ಬಾರಿಸಿದ ಆರಂಭಿಕ ಬ್ಯಾಟ್ಸಮನ್ ಮುರಳಿ ವಿಜಯ್ 155 ರನ್ ಗಳಿಸಿದರು. 20 ನೇ ಶತಕ ದಾಖಲಿಸಿದ ನಾಯಕ ವಿರಾಟ್ ಕೊಹ್ಲಿ ಅಜೇಯ 156 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 5000 ರನ್ ಗಡಿಯನ್ನು ದಾಟಿದ ಸಾಧನೆಯನ್ನೂ ಕೊಹ್ಲಿ ಮಾಡಿದರು. ಶಿಖರ್ ಧವನ್ 23 ಹಾಗೂ ಚೇತೇಶ್ವರ ಪೂಜಾರ 23 ರನ್ ಗಳಿಸಿ ಔಟಾದರು. ಅಜಿಂಕ್ಯ ರಹಾನೆ 1 ರನ್ ಗಳಿಸಿದ್ದಾಗ ಸಂದಕನ್ ಎಸೆತದಲ್ಲಿ ಸ್ಟಂಪ್ ಔಟ್ ಆಗಿ ಹೊರನಡೆದರು.

ಶ್ರೀಲಂಕಾ ಪರವಾಗಿ ಲಕ್ಷನ್ ಸಂದಕನ್ 2 ವಿಕೆಟ್ ಪಡೆದರು. ಮೊದಲ ದಿನದಾಟ ಮುಗಿದಾಗ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅಜೇಯರಾಗುಳಿದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com