Ashes Cricket : ಆತಿಥೇಯರಿಗೆ ಮೊದಲ ದಿನ ವಾರ್ನರ್, ಖವಾಜಾ ಆಸರೆ

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಎರಡನೇ ಆ್ಯಶಸ್ ಟೆಸ್ಟ್ ಶನಿವಾರ ಅಡಿಲೇಡ್ ಓವಲ್ ನಲ್ಲಿ ಆರಂಭಗೊಂಡಿದೆ. ಹಗಲು ಬೆಳಕಿನ ಈ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿತು.

ಮೊದಲ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸಮನ್ ಕ್ಯಾಮರಾನ್ ಬ್ಯಾನ್ ಕ್ರಾಫ್ಟ್ ಅವರ ವಿಕೆಟ್ ಅನ್ನು ಬೇಗನೆ ಕಳೆದುಕೊಂಡಿತು. 10 ರನ್ ಗಳಿಸಿದ್ದ ಬ್ಯಾನ್ ಕ್ರಾಫ್ಟ್ ಅವರನ್ನು ಇಂಗ್ಲೆಂಡ್ ಬೌಲರ್ ಕ್ರಿಸ್ ವೋಕ್ಸ್ ರನೌಟ್ ಮಾಡಿದರು.

ನಂತರ ಜೊತೆಯಾದ ಎಡಗೈ ಬ್ಯಾಟ್ಸಮನ್ ಡೇವಿಡ್ ವಾರ್ನರ್ ಹಾಗೂ ಉಸ್ಮಾನ್ ಖವಾಜಾ 53 ರನ್ ಜೊತೆಯಾಟವಾಡಿ ಆಸ್ಟ್ರೇಲಿಯಾ ತಂಡಕ್ಕೆ ಆಸರೆಯಾದರು. ಡೇವಿಡ್ ವಾರ್ನರ್ 47, ಉಸ್ಮಾನ್ ಖವಾಜಾ 53 ರನ್ ಗಳಿಸಿದರು. ನಾಯಕ ಸ್ಟೀವ್ ಸ್ಮಿತ್ 40 ರನ್ ಗಳಿಸಿದ್ದಾ ಕ್ರೇಗ್ ಓವರ್ಟನ್ ಎಸೆತದಲ್ಲಿ ಬೋಲ್ಡ್ ಆಗಿ ಹೊರನಡೆದರು.

ಇಂಗ್ಲೆಂಡ್ ಪರವಾಗಿ ಜೇಮ್ಸ್ ಆ್ಯಂಡರ್ಸನ್, ಕ್ರಿಸ್ ವೋಕ್ಸ್ ಹಾಗೂ ಕ್ರೇಗ್ ಓವರ್ಟನ್ ತಲಾ 1 ವಿಕೆಟ್ ಪಡೆದರು. ಮೊದಲ ದಿನದಾಟದ ಅಂತ್ಯಕ್ಕೆ ಪೀಟರ್ ಹ್ಯಾಂಡ್ಸ್ ಕಾಬ್ (36) ಹಾಗೂ ಶಾನ್ ಮಾರ್ಶ್ (20) ಅಜೇಯರಾಗುಳಿದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com