BIGG BOSS ಮಾಜಿ ಸ್ಪರ್ಧಿಗೆ ಯುವಕನಿಂದ ಹಲ್ಲೆ…ಆಗಿದ್ದೇನು ನೋಡಿ..?

ಬೆಂಗಳೂರು : ರಾತ್ರಿ ಪಾರ್ಸೆಲ್‌ ಕಟ್ಟಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಸ್ಯಾಂಡಲ್‌ ವುಡ್‌ ನಟ, ಬಿಗ್ ಬಾಸ್‌ ಸ್ಪರ್ಧಿ ಹುಚ್ಚ ವೆಂಕಟ್ ಅವರಿಗೆ ವ್ಯಕ್ತಿಯೊಬ್ಬ ಥಳಿಸಿದ ಘಟನೆ ಯಶವಂತಪುರದಲ್ಲಿ ನಡೆದಿದೆ. ಈ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ನವೆಂಬರ್‌ 29ರಂದು ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಹುಚ್ಚ ವೆಂಕಟ್‌ ಹಾಗೂ ಯುವಕರ ಗುಂಪಿನ ಮದ್ಯೆ ಸಣ್ಣ ವಿಚಾರಕ್ಕೆ ಜಗಳವಾಗಿದೆ. ಆಗ ಹುಚ್ಚ ವೆಂಕಟ್‌ ತಮ್ಮ ಶೈಲಿಯಲ್ಲೇ ಯುವಕರಿಗೆ ಬೈದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವಕನೊಬ್ಬ ತನ್ನ ಹೆಲ್ಮೆಟ್‌ನಿಂದ ಹುಚ್ಚ ವೆಂಕಟ್‌ಗೆ ಥಳಿಸಿದ್ದಾನೆ.

ಇದಾದ ಬಳಿಕ ಹುಚ್ಚ ವೆಂಕಟ್‌  ಸುಮ್ಮನೆ ಆ ಸ್ಥಳ ಬಿಟ್ಟು ಹೋಗಿದ್ದಾರೆ. ಈ ದೃಶ್ಯ ಸಹ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಕುರಿತು ಹುಚ್ಚ ವೆಂಕಟ್ ಪ್ರತಿಕ್ರಿಯೆ ನೀಡಿದ್ದು, ನನಗೂ ಅವರಿಗೂ ಚಿಕ್ಕ ವಿಚಾರಕ್ಕೆ ಜಗಳ ನಡೆದಿದೆ. ಇದು ನನಗೇನೂ ಹೊಸತಲ್ಲ. ಜಗಳವಾದ ಬಳಿಕ ನಾನು ಅವರಿಗೆ ಹೊಡೆದೆ. ನಂತರ ಅವರು ನನ್ನ ಬಳಿ ಕ್ಷಮೆ ಕೇಳಿದರು. ಇಂತಹದ್ದೆಲ್ಲ ನಡೆಯುತ್ತಿರುತ್ತದೆ. ಅದನ್ನೇ ದೊಡ್ಡದು ಮಾಡಬೇಡಿ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com